ದೆಹಲಿ-ಎನ್ಸಿಆರ್ ಪ್ರದೇಶದ ಗಾಳಿಯ ಗುಣಮಟ್ಟ ಮತ್ತೆ ಕುಸಿತಗೊಂಡಿದ್ದು, ಇಂದು ಬೆಳಿಗ್ಗೆ 7 ಗಂಟೆಗೆ ದಾಖಲಾದ ಸರಾಸರಿ ಗಾಳಿಯ ಗುಣಮಟ್ಟ ಸೂಚ್ಯಂಕ (AQI) 309 ಆಗಿದೆ ಎಂದು ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ (CPCB) ತಿಳಿಸಿದೆ. ಇದು “ಅತ್ಯಂತ ಕೆಟ್ಟ (Very Poor)” ವರ್ಗಕ್ಕೆ ಸೇರಿದ ಮಟ್ಟವಾಗಿದೆ.

ಗಾಳಿಯ ಗುಣಮಟ್ಟ ಹದಗೆಟ್ಟ ಹಿನ್ನೆಲೆಯಲ್ಲಿ, ವಾಯು ಗುಣಮಟ್ಟ ನಿರ್ವಹಣಾ ಆಯೋಗದ ಉಪಸಮಿತಿ ಈಗಾಗಲೇ “ಗ್ರೇಡೆಡ್ ರೆಸ್ಪಾನ್ಸ್ ಆಕ್ಷನ್ ಪ್ಲಾನ್” (GRAP-2) ಅಡಿ ನಿಯಂತ್ರಣ ಕ್ರಮಗಳನ್ನು ಜಾರಿಗೊಳಿಸಿದೆ. ಇದರಡಿ ನಿರ್ಮಾಣ ಕಾರ್ಯಗಳು, ಧೂಳು ನಿಯಂತ್ರಣ ಕ್ರಮಗಳು ಮತ್ತು ವಾಹನಗಳ ಮೇಲಿನ ನಿಯಮಗಳು ಕಠಿಣಗೊಂಡಿವೆ.
ಎಕ್ಯೂಐ ಪ್ರಮಾಣದ ಪ್ರಕಾರ
0ರಿಂದ 50: ಉತ್ತಮ (Good)
51 ರಿಂದ 100: ತೃಪ್ತಿಕರ (Satisfactory)
101 ರಿಂದ 200: ಮಧ್ಯಮ (Moderate)
201 ರಿಂದ 300: ಕೆಟ್ಟ (Poor)
301 ರಿಂದ 400: ಅತ್ಯಂತ ಕೆಟ್ಟ (Very Poor)
401 ರಿಂದ 450: ಗಂಭೀರ (Severe) ಎಂದು ವರ್ಗೀಕರಿಸಲಾಗಿದೆ.
ಪರಿಸರ ತಜ್ಞರು ಜನರಿಗೆ ಅನಾವಶ್ಯಕವಾಗಿ ಹೊರಗೆ ಹೋಗುವುದನ್ನು ತಪ್ಪಿಸಲು, ಮಾಸ್ಕ್ ಧರಿಸಲು ಹಾಗೂ ಮನೆಗಳಲ್ಲಿ ವಾತಾವರಣ ಶುದ್ಧೀಕರಣೆ ಸಾಧನಗಳ ಬಳಕೆಗೆ ಸಲಹೆ ನೀಡಿದ್ದಾರೆ.


