ಶುಭವಾರ್ತೆ..! ಎಲ್‌ಪಿಜಿ ಸಿಲಿಂಡರ್ ದರದಲ್ಲಿ ಇಳಿಕೆ — ನವೆಂಬರ್ 1ರ ಹೊಸ ಬೆಲೆ ಪ್ರಕಟ

ಶುಭವಾರ್ತೆ..! ಎಲ್‌ಪಿಜಿ ಸಿಲಿಂಡರ್ ದರದಲ್ಲಿ ಇಳಿಕೆ — ನವೆಂಬರ್ 1ರ ಹೊಸ ಬೆಲೆ ಪ್ರಕಟ

LPG Cylinder Price Cut : ನವೆಂಬರ್ 1ರಂದು ಕನ್ನಡ ರಾಜ್ಯೋತ್ಸವದಂದು ಕರ್ನಾಟಕ ಜನತೆಗೆ ಗುಡ್‌ನ್ಯೂಸ್ ಇಲ್ಲಿದೆ. ನವೆಂಬರ್ ತಿಂಗಳ ಎಲ್‌ಪಿಜಿ ದೇಶೀಯ ಮತ್ತು ವಾಣಿಜ್ಯ ಸಿಲಿಂಡರ್ ದರ ಬಿಡುಗಡೆಯಾಗಿದ್ದು, ಬೆಲೆ ಇಳಿಕೆಯಾಗಿದೆ. ಇದು ನಗರದಿಂದ ನಗರಕ್ಕೆ ಬೆಲೆ ವ್ಯತ್ಯಾಸವಿದ್ದು, ವಾಣಿಜ್ಯ ಎಲ್‌ಪಿಸಿ ಸಿಲಿಂಡರ್ ಬೆಲೆ ಮತ್ತಷ್ಟು ಕಡಿಮೆಯಾಗಿದೆ. ಇದ್ರಿಂದಾಗಿ ಹೋಟೆಲ್ ಉದ್ಯಮಗಳಿಗೆ ಸ್ವಲ್ಪ ರಿಲೀಫ್ ಸಿಗಲಿದೆ.

ಭಾರತೀಯ ಮಾರುಕಟ್ಟೆಯಲ್ಲಿ ನವೆಂಬರ್ ತಿಂಗಳ ಆರಂಭದಲ್ಲಿ ವಾಣಿಜ್ಯ ಎಲ್‌ಪಿಜಿ ಸಿಲಿಂಡರ್ ಬೆಲೆ ಇಳಿಕೆಯಾಗಿದೆಕೇಂದ್ರ ಸರ್ಕಾರಿ ತೈಲ ಮತ್ತು ಅನಿಲ ಮಾರುಕಟ್ಟೆ ಕಂಪನಿಗಳು ಎಲ್‌ಪಿಜಿ ಸಿಲಿಂಡರ್‌ ಬೆಲೆ ಇದೀಗ ಮತ್ತಷ್ಟು ತಗ್ಗಿಸಿವೆ. ಜಾಗತಿಕ ಮಟ್ಟದಲ್ಲಿ ಕಚ್ಚಾ ತೈಲ ಬೆಲೆ ಏರಿಕೆ ನಡುವೆ ಎಲ್‌ಪಿಜಿ ಸಿಲಿಂಡರ್ ಬೆಲೆ ಇಳಿಕೆ ಮಾಡಿರುವುದು ಉತ್ತಮ ಬೆಳವಣಿಗೆಯಾಗಿದೆ. ನವೆಂಬರ್ 1, 2025ರಂದು ಹೊಸ ದರಗಳು ಬಿಡುಗಡೆಯಾಗಿದ್ದು, ಬೆಂಗಳೂರು ಸೇರಿದಂತೆ ದೇಶದ ಅನೇಕ ನಗರಗಳಲ್ಲಿ ಬೆಲೆ ಇಳಿಕೆಯಾಗಿದೆ.

ಇದೀಗ ದೆಹಲಿ, ಬೆಂಗಳೂರು ಸೇರಿದಂತೆ ದೇಶದ ಪ್ರಮುಖ ನಗರಗಳಲ್ಲಿ ನವೆಂಬರ್‌ ತಿಂಗಳಿನಲ್ಲಿ 5 ರೂಪಾಯಿ ಬೆಲೆ ಇಳಿಕೆಯಾಗಿದ್ದು, ದೆಹಲಿಯಲ್ಲಿ ವಾಣಿಜ್ಯ ಸಿಲಿಂಡರ್ ಬೆಲೆ 1,590.50 ರೂಪಾಯಿಗೆ ತಗ್ಗಿದೆ. ಇದಕ್ಕೂ ಮುನ್ನ 1,595.50 ರೂಪಾಯಿನಷ್ಟಿತ್ತು.

ಗೃಹಬಳಕೆಯ ಸಿಲಿಂಡರ್‌ಗಳ ಬೆಲೆಯಲ್ಲಿ ಯಾವುದೇ ಬದಲಾವಣೆ ಇಲ್ಲ!

ಶನಿವಾರ (ನ.01) ವಾಣಿಜ್ಯ ಎಲ್‌ಪಿಜಿ ಸಿಲಿಂಡರ್‌ಗಳ ಬೆಲೆಯನ್ನು ತಗ್ಗಿಸಲಾಗಿದ್ರೂ, ಗೃಹಬಳಕೆಯ ಎಲ್‌ಪಿಜಿ ಸಿಲಿಂಡರ್‌ಗಳ ಬೆಲೆಯಲ್ಲಿ ಮಾತ್ರ ಮತ್ತೊಮ್ಮೆ ಯಾವುದೇ ಬದಲಾವಣೆಯಾಗಿಲ್ಲ.ದೆಹಲಿಯಲ್ಲಿ 14.2 kg ದೇಶೀಯ ಸಿಲಿಂಡರ್ ಬೆಲೆ 853 ರೂಪಾಯಿನಷ್ಟೇ ಉಳಿದಿದೆ. ಈ LPG ಸಿಲಿಂಡರ್ ಬೆಲೆ ಇಳಿಕೆಯಾಗಿ ಹಲವು ತಿಂಗಳುಗಳೇ ಕಳೆದುಹೋಗಿದೆ.

ಆದರೆ ಈ ತಿಂಗಳು ವಾಣಿಜ್ಯ ಎಲ್‌ಪಿಜಿ ಸಿಲಿಂಡರ್‌ಗಳ ಬೆಲೆಯಲ್ಲಿನ ಇಳಿಕೆಯು ರೆಸ್ಟೋರೆಂಟ್‌ಗಳಿಗೆ ಕೊಂಚ ರಿಲೀಫ್ ಕೊಟ್ಟಿದ್ದು ಊಟದ ಮೇಲೆ ಪರಿಣಾಮ ಬೀರಬಹುದು. ರೆಸ್ಟೋರೆಂಟ್‌ಗಳು ತಮ್ಮ ಆಹಾರ ದರಗಳನ್ನು ಅಲ್ಪ ತಗ್ಗಿಸಬಹುದು. ಇದ್ರಿಂದ ಹೋಟೆಲ್‌ ಊಟವನ್ನೇ ಅವಲಂಬಿಸಿದವರ ಜೇಬಿಗೆ ಉಳಿತಾಯವಾಗಲಿದೆ.

ರಾಷ್ಟ್ರೀಯ