ಆಸ್ಟ್ರೇಲಿಯಾ ವಿರುದ್ದದ ಮೊದಲ ಟಿ20 ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬೌಲಿಂಗ್ ಆಯ್ದುಕೊಂಡ ಆಸ್ಟ್ರೇಲಿಯಾ ತಂಡದ ನಿರ್ಧಾರಕ್ಕೆ ಭಾರತ ಭರ್ಜರಿ ಪ್ರತಿಕ್ರಿಯೆ ನೀಡಿತು. 9.4 ಓವರ್‌ಗಳಲ್ಲಿ 97/1 ರನ್‌ಗಳನ್ನು ಕಲೆಹಾಕಿದ್ದ ಭಾರತ ಉತ್ತಮ ಆರಂಭ ಪಡೆದಿತ್ತು. ಆದರೆ ನಿರಂತರ ಮಳೆಯಿಂದ ಪಂದ್ಯ ರದ್ದುಗೊಂಡಿತು.

ಭಾರತದ ನಾಯಕ ಸೂರ್ಯಕುಮಾರ್ ಯಾದವ್ ಮಿಂಚಿನ ಬ್ಯಾಟಿಂಗ್ ಪ್ರದರ್ಶಿಸಿದರು. ಕೇವಲ 24 ಎಸೆತಗಳಿಗೆ 39 ರನ್ ಗಳಿಸಿದ ಅವರು ಚುರುಕು ಶಾಟ್‌ಗಳ ಮೂಲಕ ಮೈದಾನವನ್ನು ರಂಗುಗೊಳಿಸಿದರು.
ಅವರಿಗೆ ಜೊತೆಯಾಗಿದ್ದ ಶುಭ್ಮನ್ ಗಿಲ್ (37)* ಸಹ ಉತ್ತಮ ಫಾರ್ಮ್ ತೋರಿದ್ದರು. ಈ ಜೋಡಿ ಒಂದು ವಿಕೆಟ್‌ಗೆ 62 ರನ್‌ಗಳ ಅಮೂಲ್ಯ ಜೊತೆಯಾಟ ನೀಡಿತ್ತು.
ಮಳೆ ತೀವ್ರಗೊಂಡ ಪರಿಣಾಮ ಆಟ ಮುಂದುವರಿಯುವ ಸಾಧ್ಯತೆ ಇಲ್ಲವೆಂದು ಅಂಪಾಯರ್‌ಗಳು ತೀರ್ಮಾನಿಸಿ ಪಂದ್ಯವನ್ನು ರದ್ದುಗೊಳಿಸಿದರು.


