ಜಾಗತಿಕ ಉದ್ಯೋಗ ಮಾರುಕಟ್ಟೆಗೆ ಆಘಾತ: ಅಮೆಜಾನ್‌ನಲ್ಲಿ ಭಾರೀ ಉದ್ಯೋಗ ಕಡಿತ

ಜಾಗತಿಕ ಉದ್ಯೋಗ ಮಾರುಕಟ್ಟೆಗೆ ಆಘಾತ: ಅಮೆಜಾನ್‌ನಲ್ಲಿ ಭಾರೀ ಉದ್ಯೋಗ ಕಡಿತ

ಯುಎಸ್ ಮೂಲದ ಇ-ಕಾಮರ್ಸ್ ದಿಗ್ಗಜ ಅಮೆಜಾನ್ ತನ್ನ ಕಚೇರಿ ಸಿಬ್ಬಂದಿಯಲ್ಲಿ ಭಾರೀ ಮಟ್ಟದ ಉದ್ಯೋಗ ಕಡಿತ ನಡೆಸಲು ನಿರ್ಧರಿಸಿದೆ. ಮಂಗಳವಾರ ಕಂಪನಿಯು ಸುಮಾರು 14,000 ಹುದ್ದೆಗಳು ಕಡಿತಗೊಳ್ಳಲಿರುವುದನ್ನು ಅಧಿಕೃತವಾಗಿ ದೃಢಪಡಿಸಿದೆ.

ಕಳೆದ ಕೆಲವು ತಿಂಗಳುಗಳಿಂದಲೇ, ಎಐ ಬಳಕೆಯ ವಿಸ್ತರಣೆ ಪರಿಣಾಮವಾಗಿ ಕೆಲಸದ ಬದಲಾವಣೆಗಳಾಗಬಹುದು ಎಂದು ಸಿಇಒ ಆಂಡಿ ಜ್ಯಾಸ್ಸಿ ಸೂಚಿಸಿದ್ದರು. ಈಗ ಅವರ ಹೇಳಿಕೆ ನಿಜವಾಗಿದ್ದು, ಮಾನವಶಕ್ತಿ ಅವಲಂಬನೆ ಕಡಿಮೆಯಾಗುತ್ತಿರುವುದನ್ನು ಈ ನಿರ್ಧಾರ ಸ್ಪಷ್ಟಪಡಿಸುತ್ತದೆ.

ಅಮೆಜಾನ್‌ನ ಪೀಪಲ್ ಎಕ್ಸ್‌ಪೀರಿಯನ್ಸ್ ಮತ್ತು ಟೆಕ್ ವಿಭಾಗದ ಹಿರಿಯ ಉಪಾಧ್ಯಕ್ಷೆ ಬೇತ್ ಗಾಲೆಟ್ಟಿ ಬ್ಲಾಗ್ ಪೋಸ್ಟ್‌ನಲ್ಲಿ ಹೇಳಿರುವಂತೆ,“ಬ್ಯೂರೋಕ್ರಸಿ ಕಡಿತಗೊಳಿಸಿ, ಅನಗತ್ಯ ಹಂತಗಳನ್ನು ತೆಗೆದು ಹಾಕುವುದು ಮತ್ತು ಪ್ರಮುಖ ಯೋಜನೆಗಳಿಗೆ ಸಂಪನ್ಮೂಲಗಳನ್ನು ಮರುಹಂಚುವುದು ನಮ್ಮ ಉದ್ದೇಶ” ಎಂದು ಸ್ಪಷ್ಟಪಡಿಸಿದ್ದಾರೆ.

ಬ್ಲೂಮ್ಬರ್ಗ್ ವರದಿ ಪ್ರಕಾರ, ಲಾಜಿಸ್ಟಿಕ್ಸ್‌, ಪಾವತಿ ಸೇವೆಗಳು, ವಿಡಿಯೋ ಗೇಮ್‌ಗಳು ಹಾಗೂ ಕ್ಲೌಡ್‌ ಕಂಪ್ಯೂಟಿಂಗ್ ವಿಭಾಗಗಳಲ್ಲಿ ಉದ್ಯೋಗ ಕಡಿತ ನಡೆಯುತ್ತಿದೆ ಎಂದು ತಿಳಿದುಬಂದಿದೆ.

ಕಂಪನಿ ಇನ್ನೂ 2026ರಲ್ಲಿ ಕೆಲವು ಪ್ರಮುಖ ವಿಭಾಗಗಳಲ್ಲಿ ನೇಮಕಾತಿ ಪುನರಾರಂಭ ಮಾಡುವ ಯೋಜನೆ ಹೊಂದಿದೆ ಎಂದೂ ಗಾಲೆಟ್ಟಿ ತಿಳಿಸಿದ್ದಾರೆ. ಇದರಿಂದ ಮುಂದೆ ಮತ್ತಷ್ಟು ಪುನರ್‌ರಚನೆ ಸಾಧ್ಯತೆ ಇದೆ ಎಂಬುದು ಸ್ಪಷ್ಟವಾಗಿದೆ.

ಟೆಕ್‌ ಕ್ಷೇತ್ರದಲ್ಲಿ ಎಐ ಪ್ರಭಾವ ಹೆಚ್ಚುತ್ತಿದ್ದು, ಮಾನವ ಉದ್ಯೋಗಗಳ ಭವಿಷ್ಯ ಕುರಿತು ಹೊಸ ಚರ್ಚೆಗಳಿಗೆ ಕಾರಣವಾಗುತ್ತಿದೆ.

ಅಂತರಾಷ್ಟ್ರೀಯ ಉದ್ಯೋಗ