ಸುಳ್ಯ: ಶಾಲಾ ಶಿಕ್ಷಣ ಇಲಾಖೆ (ಪದವಿ ಪೂರ್ವ) ದ.ಕ ಮತ್ತು ರೋಟರಿ ಸಂಯುಕ್ತ ಪದವಿ ಪೂರ್ವ ಕಾಲೇಜು ಸುಳ್ಯ ದ.ಕ ಇದರ ಸಹಯೋಗದೊಂದಿಗೆ ಅಕ್ಟೋಬರ್ ೨೮ರಂದು ಗಣ್ಯ ಅತಿಥಿಗಳ ಉಪಸ್ಥಿತಿಯಲ್ಲಿ ಸುಳ್ಯ ತಾಲೂಕು ಮಟ್ಟದ ಪದವಿ ಪರ‍್ವ ವಿಭಾಗದ ಬಾಲಕ ಬಾಲಕಿಯರ ೨೦೨೫ನೇ ಸಾಲಿನ ಕ್ರೀಡಾಕೂಟ “ರೋಟರಿ ಐಕ್ಯಂ” ರೋಟರಿ ಸಂಯುಕ್ತ ಪದವಿ ಪೂರ್ವ ಕಾಲೇಜಿನ ಮೈದಾನ ಮಿತ್ತಡ್ಕದಲ್ಲಿ ನಡೆಯಲಿದೆ. ಈ ಕ್ರೀಡಾಕೂಟದಲ್ಲಿ ಬಾಲಕ ಮತ್ತು ಬಾಲಕಿಯರ ಉದ್ದ ಜಿಗಿತ, ತ್ರಿವಿಧ ಜಿಗಿತ,ಎತ್ತರ ಜಿಗಿತ ಮತ್ತು ಕೋಲೂರಿ ಜಿಗಿತ,ಓಟ,ನಡಿಗೆ ಓಟ,ಗುಂಡೆಸೆತ ಮತ್ತು ಸುತ್ತಿಗೆ ಎಸೆತ,ಚಕ್ರ ಎಸೆತ ಮತ್ತು ಈಟಿ ಎಸೆತ, ರಿಲೇ ಇತ್ಯಾದಿ ಸ್ಪರ್ಧೆಗಳು ನಡೆಯಲಿವೆ ಎಂದು ಸುಳ್ಯದ ರೋಟರಿ ವಿದ್ಯಾಸಂಸ್ಥೆಗಳ ಪ್ರಕಟಣೆ ತಿಳಿಸಿದೆ.


