ಚಿತೇಶ್ ಸಂಗೀತ ಬಳಗ ಸುಳ್ಯ ವತಿಯಿಂದ ಸೀಸನ್-4 ಕರೋಕೆ ಸಂಗೀತ ಸ್ಪರ್ಧೆ ಅದ್ದೂರಿಯಾಗಿ ನೆರವೇರಿತು 🎶

ಚಿತೇಶ್ ಸಂಗೀತ ಬಳಗ ಸುಳ್ಯ ವತಿಯಿಂದ ಸೀಸನ್-4 ಕರೋಕೆ ಸಂಗೀತ ಸ್ಪರ್ಧೆ ಅದ್ದೂರಿಯಾಗಿ ನೆರವೇರಿತು 🎶

ಸುಳ್ಯ: ಚಿತೇಶ್ ಸಂಗೀತ ಬಳಗ ಸುಳ್ಯ ಇದರ ವತಿಯಿಂದ ಆಯೋಜಿಸಿದ ಸೀಸನ್ 4 ಸಂಗೀತ ಸ್ಪರ್ಧೆ (ಕರೋಕೆ) ಯು ದಿನಾಂಕ 26.10.2025 ರಂದು ಸುಳ್ಯ ಎ.ಪಿ.ಎಂ.ಸಿ. ಸಭಾಂಗಣದಲ್ಲಿ ಅದ್ದೂರಿಯಾಗಿ ನಡೆಯಿತು.
ಕಾರ್ಯಕ್ರಮದ ಉದ್ಘಾಟನೆಯನ್ನು ಐವರ್ನಾಡಿನ ರಾಜ್ಯ ಪ್ರಶಸ್ತಿ ವಿಜೇತ, ಮುತ್ತು ಕೃಷಿಕ ನವೀನ್ ಚಾತುಬಾಯಿ ರವರು ಹಾಗೂ ಸಾವಿತ್ರಿ ದೊಡ್ಡಮನೆರವರು ನೆರವೇರಿಸಿದರು. ಸಭಾಧ್ಯಕ್ಷತೆಯನ್ನು ಐವರ್ನಾಡು ಗ್ರಾಂ.ಪ. ಸದಸ್ಯೆ,ಸುಜಾತ ಪವಿತ್ರಮಜಲು ವಹಿಸಿದ್ದರು. ವೇದಿಕೆಯಲ್ಲಿ ಶಶಿರಾಜ್ ದೈಹಿಕ ಶಿಕ್ಷಣ ಶಿಕ್ಷಕರು ಮಂಗಳೂರು, ಪೂರ್ಣಿಮ ಪೆರ್ಲಂಪಾಡಿ ಉಪಸ್ಥಿತರಿದ್ದರು.
ನಂತರ ನಡೆದ ಸ್ಪರ್ಧೆಯಲ್ಲಿ ರಾಜ್ಯ ಹಾಗೂ ಹೊರ ರಾಜ್ಯಗಳಿಂದ ಅನೇಕ ಮಂದಿ ಸ್ಪರ್ಧಿಗಳು ಭಾಗವಹಿಸಿದ್ದರು. 60 ದಾಟಿದ ಹಿರಿಯರು ಹಾಗೂ ಪುಟ್ಟ ಪುಟ್ಟ ಮಕ್ಕಳು ಸ್ಪರ್ಧೆಯಲ್ಲಿ ಭಾಗವಹಿಸಿ ಎಲ್ಲರ ಗಮನ ಸೆಳೆದರು. ಸ್ಪರ್ಧೆಯಲ್ಲಿ ಹಿರಿಯರ ವಿಭಾಗ ಕಿರಿಯರ ವಿಭಾಗ ಅದರಲ್ಲಿ ಪ್ರಥಮ, ದ್ವಿತೀಯ, ತೃತೀಯ ಎಂದು ವಿಂಗಡಿಸಲಾಗಿತ್ತು.
ಸ0ಜೆ ಪ್ರತಿಭಾವಂತರಿಗೆ ಸನ್ಮಾನ. (ಸುರೇಶ್ ರಾವ್ ಮಂಗಳೂರು.
ಹರ್ಷಿತ ಐವರ್ನಾಡು. ಧನ್ವಿ ರೖ ಪಾಣಜೆ. ಸೌರವ್ ವಿಟ್ಲ.) ಅಭಿನಂದನ ಸನ್ಮಾನ ಕಾರ್ಯಕ್ರಮ ನಡೆದ ಸಮಾರೋಪ ಕಾರ್ಯಕ್ರಮದಲ್ಲಿ, ಮೋಹನ್ ನಂಗಾರು ,ಶಿವರಾಮ ನೆಕ್ರಪ್ಪಾಡಿ, ಭೀಮಾರಾವ್ ವಾಷ್ಠರ್ ,ವಿಜಯಕುಮಾರ್ ಸುಳ್ಯ ಭಾಗವಹಿಸಿದ್ದರು ನೆರವೇರಿಸಿ ಕೊಟ್ಟರು.ನವೀನ್ ಬಾಂಜಿಕೋಡಿ ನಿರೂಪಣೆ ಅದ್ಬುತವಾಗಿ ಮೂಡಿ ಬಂತು.
ಪೆರುಮಾಳ್ ಲಕ್ಷ್ಮಣ್ ಐವರ್ನಾಡು ಇದರ ನೇತೃತ್ವ ವಹಿಸಿದ್ದರು. ರೋಹಿತ್ ಬಾಂಜಿಕೋಡಿ, ಪ್ರಸಾದ್ ಕೆಮ್ಮಿಂಜೆ, ಹಾಗೂ ಗಾಯಕ ರಾಜೇಶ್ ಎಸ್. ಎನ್. ಗಾಯಕಿ. ಪುಷ್ಪಾವತಿ. ಶುಭ ರೈ ಪುತ್ತೂರು. ಅರುಣ್ ರಾವ್ ಸುಳ್ಯ.
ಅಮಿತಾ ಐವರ್ನಾಡು. ಸಹಕರಿಸಿದರು.

ಮನೋರಂಜನೆ