ಟಿಸಿಎಸ್ ಉದ್ಯೋಗದ ಕರಾಳ ಸತ್ಯ: 13 ವರ್ಷದ ಸೇವೆಗೆ ಕೇವಲ 30 ನಿಮಿಷದಲ್ಲಿ ತೆರೆ!

ಟಿಸಿಎಸ್ ಉದ್ಯೋಗದ ಕರಾಳ ಸತ್ಯ: 13 ವರ್ಷದ ಸೇವೆಗೆ ಕೇವಲ 30 ನಿಮಿಷದಲ್ಲಿ ತೆರೆ!

ಬೆಂಗಳೂರು: ದೇಶದ ಅತಿದೊಡ್ಡ ಐಟಿ ಕಂಪನಿಗಳಲ್ಲಿೊಂದಾದ ಟಾಟಾ ಕನ್ಸಲ್ಟನ್ಸಿ ಸರ್ವಿಸಸ್‌ (ಟಿಸಿಎಸ್‌) ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದ ಉದ್ಯೋಗಿಯೊಬ್ಬನಿಗೆ 13 ವರ್ಷಗಳ ಸೇವೆಯ ನಂತರ ಕೇವಲ 30 ನಿಮಿಷಗಳಲ್ಲಿ ವಿದಾಯ ಹೇಳಬೇಕಾದ ಘಟನೆ ಬೆಳಕಿಗೆ ಬಂದಿದೆ.

ಸಂಸ್ಥೆಯ ಆಂತರಿಕ ನೀತಿಗಳ ಅಡಿಯಲ್ಲಿ ನಡೆಯುತ್ತಿರುವ ಪುನರ್‌ರಚನೆ ಮತ್ತು ಸಿಬ್ಬಂದಿ ಕಡಿತದ ಕ್ರಮದಲ್ಲಿ ಈ ಘಟನೆ ಸಂಭವಿಸಿದೆ ಎಂದು ಮೂಲಗಳು ತಿಳಿಸಿವೆ. 13 ವರ್ಷಗಳಿಂದ ಪ್ರಾಮಾಣಿಕವಾಗಿ ಸೇವೆ ಸಲ್ಲಿಸುತ್ತಿದ್ದ ಆ ಉದ್ಯೋಗಿಗೆ ಯಾವುದೇ ಪೂರ್ವ ಸೂಚನೆ ಇಲ್ಲದೆ, ಕೇವಲ ಒಂದು ವರ್ಚುವಲ್‌ ಮೀಟಿಂಗ್‌ನಲ್ಲಿ ಉದ್ಯೋಗದಿಂದ ಬಿಡುವ ನಿರ್ಧಾರ ತಿಳಿಸಲಾಯಿತು.

ಈ ಬೆಳವಣಿಗೆ ಬಳಿಕ ಸಾಮಾಜಿಕ ಜಾಲತಾಣಗಳಲ್ಲಿ ಟಿಸಿಎಸ್ ವಿರುದ್ಧ ತೀವ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಅನೇಕರು “ಉದ್ಯೋಗಿಗಳ ಶ್ರಮಕ್ಕೆ ಗೌರವವಿಲ್ಲದ ಕಂಪನಿಗಳ ನೈತಿಕತೆ ಪ್ರಶ್ನಾರ್ಥಕ” ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಆದರೆ ಟಿಸಿಎಸ್‌ ಪರವಾಗಿ ಪ್ರತಿಕ್ರಿಯಿಸಿದ ವಕ್ತಾರರು, “ಕಂಪನಿಯ ಕಾರ್ಯಪದ್ಧತಿಯನ್ನು ಸುಧಾರಿಸುವ ನಿಟ್ಟಿನಲ್ಲಿ ಅಗತ್ಯ ಕ್ರಮ ಕೈಗೊಳ್ಳಲಾಗಿದೆ, ಎಲ್ಲವೂ ನಿಯಮಾನುಸಾರವಾಗಿದೆ” ಎಂದು ಹೇಳಿದ್ದಾರೆ.

ಉದ್ಯೋಗ