ಸುಖಾಸನದಲ್ಲಿ ಕೂತಿದ್ದೆ, ಅದೇ ತಪ್ಪಾ? : ತಾಜ್ ಹೋಟೆಲ್ ವಿರುದ್ಧ ಶ್ರದ್ಧಾ ಶರ್ಮಾ ಆಕ್ರೋಶ – ಏನಿದು ವಿವಾದ?

ಸುಖಾಸನದಲ್ಲಿ ಕೂತಿದ್ದೆ, ಅದೇ ತಪ್ಪಾ? : ತಾಜ್ ಹೋಟೆಲ್ ವಿರುದ್ಧ ಶ್ರದ್ಧಾ ಶರ್ಮಾ ಆಕ್ರೋಶ – ಏನಿದು ವಿವಾದ?

ದೆಹಲಿ: ಪ್ರಸಿದ್ಧ ಉದ್ಯಮಿ ಹಾಗೂ YourStory ಸಂಸ್ಥಾಪಕಿ ಶ್ರದ್ಧಾ ಶರ್ಮಾ ಅವರು ದೆಹಲಿಯ ತಾಜ್ ಮಹಲ್ ಹೋಟೆಲ್‌ನ ಹೌಸ್ ಆಫ್ ಮಿಂಗ್ ರೆಸ್ಟೋರೆಂಟ್‌ನಲ್ಲಿ ಅನುಭವಿಸಿದ ಘಟನೆ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಚರ್ಚೆಗೆ ಕಾರಣವಾಗಿದೆ.

ದೀಪಾವಳಿ ದಿನ ತನ್ನ ಸಹೋದರಿಯೊಡನೆ ಊಟಕ್ಕೆ ಹೋದಾಗ, ಶ್ರದ್ಧಾ ಶರ್ಮಾ ಅವರು ಸುಖಾಸನದಲ್ಲಿ (cross-legged posture) ಕುಳಿತಿದ್ದುದನ್ನು ಗಮನಿಸಿದ ಮ್ಯಾನೇಜರ್, ಅದು “ಇಲ್ಲಿ ಅನೇಕ ಶ್ರೀಮಂತರು ಬರುತ್ತಾರೆ” ಎಂದು ಹೇಳುತ್ತಾ, ಅವರ ಕುಳಿತ ರೀತಿ ಹಾಗೂ ಉಡುಪು (ಸಲ್ವಾರ್ ಕಮೀಜ್ ಮತ್ತು ಕೊಲ್ಹಾಪುರಿ ಚಪ್ಪಲಿಗಳು) ಹೋಟೆಲ್‌ನ “ಫೈನ್ ಡೈನಿಂಗ್” ವಾತಾವರಣಕ್ಕೆ ತಕ್ಕುದಲ್ಲ ಎಂದು ಹೇಳಿದರೆಂದು ಶ್ರದ್ಧಾ ತಮ್ಮ ವಿಡಿಯೋದಲ್ಲಿ ತಿಳಿಸಿದ್ದಾರೆ.

ಈ ಘಟನೆಯಿಂದ ತಾನು ಅವಮಾನಿತಳಾದೆ ಎಂದು ಶ್ರದ್ಧಾ ಹೇಳಿದ್ದಾರೆ. “ನಾನು ನನ್ನ ಶ್ರಮದ ಹಣ ನೀಡಿ ಊಟ ಮಾಡುತ್ತಿದ್ದೆ. ನನ್ನ ಸಂಸ್ಕೃತಿ ಹಾಗೂ ವೈಯಕ್ತಿಕ ಅಭಿವ್ಯಕ್ತಿಗೆ ಗೌರವ ತೋರದ ಈ ರೀತಿಯ ವರ್ತನೆ ನೋವುಂಟುಮಾಡಿದೆ,” ಎಂದು ಅವರು X ನಲ್ಲಿ ಪೋಸ್ಟ್ ಮಾಡಿದ್ದಾರೆ.

ಈ ಘಟನೆಯು ಈಗ ಆನ್‌ಲೈನ್‌ನಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ. ಕೆಲವರು ಶ್ರದ್ಧಾ ಶರ್ಮಾ ಅವರ ಪರ ನಿಂತು “ವೈಯಕ್ತಿಕ ಸ್ವಾತಂತ್ರ್ಯ ಮತ್ತು ಸಾಂಸ್ಕೃತಿಕ ಅಭಿವ್ಯಕ್ತಿ”ಗೆ ಬೆಂಬಲ ವ್ಯಕ್ತಪಡಿಸಿದ್ದಾರೆ. ಇನ್ನು ಕೆಲವರು ಹೋಟೆಲ್‌ನ ನಡತೆ ಮತ್ತು ಶಿಸ್ತಿನ ಮಾನದಂಡಗಳನ್ನು ರಕ್ಷಿಸುತ್ತಿದ್ದಾರೆ, ಎಂದು ಸಾಮಾಜಿಕ ಜಾಲತಾಣದಲ್ಲಿ ಭಾರೀ ಚರ್ಚೆಗಳು ನಡೆಯುತ್ತಿವೆ.

ವರದಿಯ ಪ್ರಕಾರ, ತಾಜ್ ಮಹಲ್ ಹೋಟೆಲ್ ಈ ಬಗ್ಗೆ ಅಧಿಕೃತ ಪ್ರತಿಕ್ರಿಯೆ ನೀಡಿಲ್ಲ.

ರಾಷ್ಟ್ರೀಯ