BBK 12: ಸೂರಜ್ ಎಲ್ಲರ ಹೃದಯ ಗೆದ್ದರು; ಇಬ್ಬರ ಸ್ವಾರ್ಥದಿಂದ ಮನೆಯಲ್ಲಿ ಭಾರಿ ಗೊಂದಲ!

BBK 12: ಸೂರಜ್ ಎಲ್ಲರ ಹೃದಯ ಗೆದ್ದರು; ಇಬ್ಬರ ಸ್ವಾರ್ಥದಿಂದ ಮನೆಯಲ್ಲಿ ಭಾರಿ ಗೊಂದಲ!

ಬಿಗ್‌ಬಾಸ್ ಕೊಟ್ಟ ಕ್ಯಾಪ್ಟನ್ಸಿ ಟಾಸ್ಕ್‌ನ ವಿಶೇಷ ಅಧಿಕಾರದ ಕಾರಣದಿಂದ ಮನೆಯಲ್ಲಿ ಭಾರೀ ವಿವಾದ ಉಂಟಾಗಿದೆ. ಸೂರಜ್ ತಮ್ಮ ತಂಡಕ್ಕೆ ಬೆಂಬಲ ನೀಡಿ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಅವರ ಈ ನಿರ್ಧಾರದಿಂದ ಮನೆಯ ಸದಸ್ಯರು ರಿಷಾ ಮತ್ತು ರಘು ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಇದೆಲ್ಲಕ್ಕಿಂತ ಹೆಚ್ಚಾಗಿ, ಕ್ಯಾಪ್ಟನ್ಸಿ ಟಾಸ್ಕ್‌ನಲ್ಲಿ ಇಬ್ಬರನ್ನು ಹೊರಗಿಡುವ ವಿಶೇಷ ಅಧಿಕಾರವೂ ಅವರಿಗೆ ಲಭಿಸಿತ್ತು. ಮೂವರು ಸೇರಿ ಚರ್ಚಿಸಿ ಅಶ್ವಿನಿ ಗೌಡ ಹಾಗೂ ಕಾಕ್ರೋಚ್ ಸುಧಿ ಅವರನ್ನು ಟಾಸ್ಕ್‌ನಿಂದ ಹೊರಗಿಟ್ಟಿದ್ದಾರೆ. ಇದರ ಜೊತೆಗೆ, ಇದೇ ಮೂವರು ಕ್ಯಾಪ್ಟನ್ಸಿ ಟಾಸ್ಕ್‌ನ ತಂಡಗಳ ನಾಯಕತ್ವ ವಹಿಸಿದ್ದಾರೆ. ಆದರೆ, ಬಿಗ್‌ಬಾಸ್ ನೀಡಿದ ಹೊಸ ಟ್ವಿಸ್ಟ್‌ನ ಪರಿಣಾಮವಾಗಿ ಮನೆಯಲ್ಲಿ ಭಾರಿ ಗೊಂದಲ ಉಂಟಾಗಿದೆ. ಇದರಿಂದ ರಿಷಾ ಮತ್ತು ರಘು ವಿರುದ್ಧ ಅವರದೇ ತಂಡದ ಸದಸ್ಯರು ಬಂಡಾಯ ಎದ್ದಿದ್ದಾರೆ.

ಮನೋರಂಜನೆ