ಭಾರತದಲ್ಲಿ ನಾಗರಿಕ ಹೊಣೆಗಾರಿಕೆಯ ಕುರಿತು ಚರ್ಚೆ ಹುಟ್ಟಿಸಿರುವ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ. ರಷ್ಯಾದ ಪ್ರವಾಸಿ ಮಹಿಳೆಯೊಬ್ಬರು ಭಾರತದ ಬೀದಿಗಳಲ್ಲಿ ಕಸ ಎಸೆಯುತ್ತಿದ್ದ ಮಕ್ಕಳನ್ನು ಪ್ರಶ್ನಿಸಿರುವ ವಿಡಿಯೋ ಇತ್ತೀಚೆಗೆ ವೈರಲ್ ಆಗಿದ್ದು, 28 ಮಿಲಿಯನ್‌ಕ್ಕೂ ಹೆಚ್ಚು ವೀಕ್ಷಣೆಗಳನ್ನು ಗಳಿಸಿದೆ.

ಇನ್‌ಸ್ಟಾಗ್ರಾಂನಲ್ಲಿ ಅಮೇನಾ ಫೈನ್ಡ್ಸ್ (Ameana Finds) ಎಂಬ ಖಾತೆಯಿಂದ ಹಂಚಲಾದ ವಿಡಿಯೋದಲ್ಲಿ, ಆ ಮಹಿಳೆಯು ಬೀದಿಯಲ್ಲಿ ಕಸ ಎಸೆಯುತ್ತಿದ್ದ ಮಕ್ಕಳಿಗೆ “ನೀವು ಈ ರೀತಿ ಮುಂದುವರೆಸಿದರೆ ಕಸದಲ್ಲೇ ಬದುಕಿ ಬೆಳೆಯುತ್ತೀರಿ” ಎಂದು ಎಚ್ಚರಿಸುತ್ತಿರುವುದು ಕಂಡುಬರುತ್ತದೆ. ಆದರೆ ಆಕೆ ಮಾಡಿದ ಮನವಿಯನ್ನು ಮಕ್ಕಳು ಕಡೆಗಣಿಸಿ, ಇನ್ನಷ್ಟು ಕಸ ಎಸೆದಿದ್ದಾರೆ.
ಈ ಘಟನೆಗೆ ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಪ್ರತಿಕ್ರಿಯೆಗಳು ವ್ಯಕ್ತವಾಗಿದ್ದು, ಕೆಲವರು ಆ ಪ್ರವಾಸಿ ಮಹಿಳೆಯನ್ನು ಶ್ಲಾಘನೆ ಮಾಡಿದ್ದರೆ, ಇನ್ನು ಕೆಲವರು ಮಕ್ಕಳ ಅಸಭ್ಯ ವರ್ತನೆಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಕುರಿತಾಗಿ ಕೇಂದ್ರ ಸಚಿವ ಕಿರೆನ್ ರಿಜಿಜು ಕೂಡ ಪ್ರತಿಕ್ರಿಯೆ ನೀಡಿದ್ದು, ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ವಿಡಿಯೋ ಹಂಚಿ, “ಮಕ್ಕಳಲ್ಲಿ ಸ್ವಚ್ಛತೆಯ ಅರಿವು ಮೂಡಿಸಲು ಪೋಷಕರು ಹಾಗೂ ಶಿಕ್ಷಕರು ಗಮನ ಹರಿಸಬೇಕು” ಎಂದು ಕರೆ ನೀಡಿದ್ದಾರೆ.
https://www.instagram.com/reel/DPnpQZUjIA5/?igsh=MXQybWdncmVmY2lhMA==

