ನಾಳೆಯಿಂದ ಅಮೆರಿಕಾಕ್ಕೆ ಅಂತರಾಷ್ಟ್ರೀಯ ಅಂಚೆ ಸೇವೆ ಪುನರಾರಂಭ

ನಾಳೆಯಿಂದ ಅಮೆರಿಕಾಕ್ಕೆ ಅಂತರಾಷ್ಟ್ರೀಯ ಅಂಚೆ ಸೇವೆ ಪುನರಾರಂಭ

ನವದೆಹಲಿ: ನಾಳೆಯಿಂದ ಭಾರತದಿಂದ ಅಮೆರಿಕಾಕ್ಕೆ ಅಂತರಾಷ್ಟ್ರೀಯ ಅಂಚೆ ಸೇವೆ ಪುನರಾರಂಭವಾಗಲಿದೆ ಎಂದು ಸಂವಹನ ಸಚಿವಾಲಯ ಪ್ರಕಟಿಸಿದೆ.

ಸಚಿವಾಲಯದ ಪ್ರಕಟಣೆಯ ಪ್ರಕಾರ, ಇಂಡಿಯಾ ಪೋಸ್ಟ್ ಇದೀಗ “ಡಿಲಿವರಿ ಡ್ಯೂಟಿ ಪೇಯ್ಡ್ (DDP)” ಪ್ರಕ್ರಿಯೆಗೆ ಅಗತ್ಯವಿರುವ ವ್ಯವಸ್ಥೆಯನ್ನು ಯಶಸ್ವಿಯಾಗಿ ಸ್ಥಾಪಿಸಿದೆ. ಈ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸಲು ಮತ್ತು ಅಮೆರಿಕದ ಕಸ್ಟಮ್ಸ್ ಹಾಗೂ ಬಾರ್ಡರ್ ಪ್ರೊಟೆಕ್ಷನ್ ಅಧಿಕಾರಿಗಳೊಂದಿಗೆ ಸಮನ್ವಯ ಸಾಧಿಸಲು ವ್ಯಾಪಕ ಪ್ರಯತ್ನಗಳು ನಡೆದಿವೆ.

ಹೊಸ ವ್ಯವಸ್ಥೆಯಿಂದ ಪೂರ್ಣ ನಿಯಾಮಕ ಅನುಸರಣೆ, ವೇಗವಾದ ಕಸ್ಟಮ್ಸ್ ಕ್ಲಿಯರೆನ್ಸ್ ಮತ್ತು ಅಮೆರಿಕಾದ ವಿಳಾಸದವರಿಗೆ ಯಾವುದೇ ಹೆಚ್ಚುವರಿ ಸುಂಕ ಅಥವಾ ವಿಳಂಬವಿಲ್ಲದೆ ಅಂಚೆ ತಲುಪುವಂತಾಗಿದೆ ಎಂದು ಸಚಿವಾಲಯ ತಿಳಿಸಿದೆ.

ಅಮೆರಿಕಾಕ್ಕೆ ಅಂಚೆ ಸೇವೆ ಮೊದಲು ಸ್ಥಗಿತಗೊಂಡಿತ್ತು. ಅಮೆರಿಕಾ ಸರ್ಕಾರದ ಕಾರ್ಯಾಧೇಶದ ನಂತರ, ಅಲ್ಲಿ ಹೊಸ ಕಸ್ಟಮ್ಸ್ ನಿಯಮಗಳು ಜಾರಿಯಾಗಿದ್ದರಿಂದ, ಆಮದು ಸುಂಕ ಸಂಗ್ರಹಣೆ ಮತ್ತು ಪಾವತಿ ಸಂಬಂಧಿತ ಪ್ರಕ್ರಿಯೆಗಳಲ್ಲಿ ಬದಲಾವಣೆ ಅಗತ್ಯವಾಯಿತು.

ಈಗ, ಭಾರತ ಅಂಚೆ ಇಲಾಖೆ ತಾಂತ್ರಿಕ ಮತ್ತು ನಿಯಾಮಕ ಬದಲಾವಣೆಗಳನ್ನು ಪೂರ್ಣಗೊಳಿಸಿರುವುದರಿಂದ, ಅಮೆರಿಕಾಕ್ಕೆ ಅಂಚೆ ಸೇವೆ ಪುನಃ ಆರಂಭವಾಗುತ್ತಿದೆ ಎಂದು ಸಚಿವಾಲಯ ಸ್ಪಷ್ಟಪಡಿಸಿದೆ.

ಅಂತರಾಷ್ಟ್ರೀಯ ರಾಷ್ಟ್ರೀಯ