ಭಾರತೀಯ ನೌಕಾಪಡೆ ಜೊತೆ ಕೈಜೋಡಿಸಿದ ರೋಲ್ಸ್-ರಾಯ್ಸ್ — ದೇಶದ ಮೊದಲ ಎಲೆಕ್ಟ್ರಿಕ್ ಯುದ್ಧನೌಕೆ ಅಭಿವೃದ್ಧಿಗೆ ನಾಂದಿ

ಭಾರತೀಯ ನೌಕಾಪಡೆ ಜೊತೆ ಕೈಜೋಡಿಸಿದ ರೋಲ್ಸ್-ರಾಯ್ಸ್ — ದೇಶದ ಮೊದಲ ಎಲೆಕ್ಟ್ರಿಕ್ ಯುದ್ಧನೌಕೆ ಅಭಿವೃದ್ಧಿಗೆ ನಾಂದಿ

ನವದೆಹಲಿ: ಭಾರತದ ನೌಕಾಪಡೆ ಆಧುನಿಕೀಕರಣದ ನೂತನ ಹಂತಕ್ಕೆ ಕಾಲಿಟ್ಟಿದೆ. ಖ್ಯಾತ ಬ್ರಿಟಿಷ್ ಎಂಜಿನ್ ತಯಾರಕ ಸಂಸ್ಥೆ ರೋಲ್ಸ್-ರಾಯ್ಸ್ (Rolls-Royce) ಇದೀಗ ಭಾರತೀಯ ನೌಕಾಪಡೆಯೊಂದಿಗೆ ಕೈಜೋಡಿಸಿ ದೇಶದ ಮೊದಲ ಎಲೆಕ್ಟ್ರಿಕ್ ಯುದ್ಧ ನೌಕೆ (Electric Warship) ವಿನ್ಯಾಸ ಮತ್ತು ನಿರ್ಮಾಣಕ್ಕೆ ಮುಂದಾಗಿದೆ.

ಈ ಯೋಜನೆ ಮೂಲಕ ಭಾರತವು ಸ್ವಯಂಸಮೃದ್ಧ ಮತ್ತು ಪರಿಸರ ಸ್ನೇಹಿ ರಕ್ಷಣಾ ತಂತ್ರಜ್ಞಾನ ಅಭಿವೃದ್ಧಿಯತ್ತ ಮಹತ್ವದ ಹೆಜ್ಜೆ ಇಡುತ್ತಿದೆ. ರೋಲ್ಸ್-ರಾಯ್ಸ್ ತನ್ನ ಹೈಬ್ರಿಡ್-ಎಲೆಕ್ಟ್ರಿಕ್ ಮತ್ತು ಫುಲ್ ಎಲೆಕ್ಟ್ರಿಕ್ ಪ್ರಪಲ್ಷನ್ ವ್ಯವಸ್ಥೆಗಳ ಪರಿಣತಿಯನ್ನು ಬಳಸಿಕೊಂಡು, ಮುಂದಿನ ತಲೆಮಾರಿನ ನೌಕಾ ತಂತ್ರಜ್ಞಾನ ಪರಿಹಾರಗಳನ್ನು ನೀಡಲಿದೆ.

MT30 ಮೆರೈನ್ ಗ್ಯಾಸ್ ಟರ್ಬೈನ್, ವಿಶ್ವದ ಅತ್ಯಂತ ವಿಶ್ವಾಸಾರ್ಹ ಮತ್ತು ಶಕ್ತಿಶಾಲಿ ಟರ್ಬೈನ್‌ಗಳಲ್ಲಿ ಒಂದಾಗಿ ಪರಿಗಣಿಸಲ್ಪಟ್ಟಿದ್ದು, ಈ ನೌಕೆಯ ಪ್ರಮುಖ ಎಂಜಿನ್ ಆಗಿ ಕಾರ್ಯನಿರ್ವಹಿಸಲಿದೆ. HMS Prince of Wales ನೌಕೆಯು ಮುಂಬೈಗೆ ಆಗಮನಿಸಿದ ಸಂದರ್ಭದಲ್ಲಿ ಈ ತಂತ್ರಜ್ಞಾನ ಪ್ರದರ್ಶನವಾಗಿತ್ತು.

ಈ ಸಹಭಾಗಿತ್ವದಿಂದ ಭಾರತ–ಬ್ರಿಟನ್ ನೌಕಾ ಸಂಬಂಧಗಳು ಮತ್ತಷ್ಟು ಬಲಪಡಲಿದ್ದು, ರಕ್ಷಣಾ ಕ್ಷೇತ್ರದಲ್ಲಿ ತಾಂತ್ರಿಕ ಸಹಕಾರಕ್ಕೆ ಹೊಸ ದಾರಿಗಳು ತೆರೆದಿವೆ.

ರೋಲ್ಸ್-ರಾಯ್ಸ್ ಸಂಸ್ಥೆಯು ಶಾಶ್ವತ, ಪರಿಣಾಮಕಾರಿ ಹಾಗೂ ಭವಿಷ್ಯೋನ್ಮುಖ ರಕ್ಷಣಾ ವ್ಯವಸ್ಥೆಗಳತ್ತ ಕೇಂದ್ರೀಕೃತವಾಗಿದ್ದು, ಇದರೊಂದಿಗೆ ಭಾರತವು ಶುದ್ಧ ಶಕ್ತಿ ಆಧಾರಿತ, ಹೆಚ್ಚು ಸಾಮರ್ಥ್ಯ ಹೊಂದಿದ ಯುದ್ಧ ನೌಕೆಗಳ ನಿರ್ಮಾಣದತ್ತ ಮುನ್ನಡೆಯಲಿದೆ.

ರಾಷ್ಟ್ರೀಯ