ಬೀಗ ಬಿದ್ದ ಬಿಗ್ ಬಾಸ್ ಮನೆ ಮತ್ತೆ ತೆರೆಯಿತು! – ಹೊಸ ಪ್ರೋಮೋ ರಿಲೀಸ್ ಮಾಡಿದ ವಾಹಿನಿ

ಬೀಗ ಬಿದ್ದ ಬಿಗ್ ಬಾಸ್ ಮನೆ ಮತ್ತೆ ತೆರೆಯಿತು! – ಹೊಸ ಪ್ರೋಮೋ ರಿಲೀಸ್ ಮಾಡಿದ ವಾಹಿನಿ

ಬೆಂಗಳೂರು: ಎರಡು ದಿನಗಳ ಹಿಂದೆ ಬಿಗ್ ಬಾಸ್ ಮನೆಗೆ ಬೀಗ ಜಡಿಯಲಾಗಿದ್ದರಿಂದ ಶೋ ಮುಗಿದಿತೇ ಎಂಬ ಆತಂಕದಲ್ಲಿ ಇದ್ದ ಅಭಿಮಾನಿಗಳಿಗೆ ಈಗ ದೊಡ್ಡ ರಿಲೀಫ್ ಸಿಕ್ಕಿದೆ. ಬಹು ನಿರೀಕ್ಷಿತ ಬಿಗ್ ಬಾಸ್ ಕನ್ನಡ ಸೀಸನ್ 12 ಮತ್ತೆ ಜೀವ ತುಂಬಿಕೊಂಡಿದೆ.

ಕಲರ್ಸ್ ಕನ್ನಡ ವಾಹಿನಿ ಬೆಳ್ಳಂಬೆಳಗ್ಗೆ ಹೊಸ ಪ್ರೋಮೋವನ್ನು ಬಿಡುಗಡೆ ಮಾಡಿ, “ಎಂದಿನಂತೆ ಅದೇ ಸಮಯದಲ್ಲಿ” ಎಂದು ಘೋಷಿಸಿದೆ. ಪ್ರೋಮೋದಲ್ಲಿ ಬಿಗ್ ಬಾಸ್ ಮನೆಯಲ್ಲಿ ನವೀಕೃತವಾದ ಹಾಲ್, ಕಿಚನ್, ಬೆಡ್‌ರೂಮ್ ನಲ್ಲಿ ಒಂದೊಂದಾಗಿ ಲೈಟ್ ಬೆಳಗುವ ದೃಶ್ಯ ಹಾಗೂ ಮೇನ್ ಗೇಟ್ ದೃಶ್ಯಗಳನ್ನು ತೋರಿಸಿ ಅಭಿಮಾನಿಗಳಲ್ಲಿ ಹೊಸ ಉತ್ಸಾಹವನ್ನು ಮೂಡಿಸಿದೆ.

ಬಿಗ್ ಬಾಸ್ ಶೋ ಸೋಮವಾರದಿಂದ ಶುಕ್ರವಾರದವರೆಗೆ ಪ್ರತಿದಿನ ರಾತ್ರಿ 9.30ಕ್ಕೆ ಪ್ರಸಾರವಾಗಲಿದೆ. ಶನಿವಾರ ಮತ್ತು ಭಾನುವಾರ ವಿಶೇಷ ಎಪಿಸೋಡ್‌ಗಳೊಂದಿಗೆ ಮನರಂಜನೆ ಡಬಲ್ ಡೋಸ್ ಆಗಲಿದೆ ಎಂದು ವಾಹಿನಿ ಮೂಲಗಳು ತಿಳಿಸಿವೆ.

ಕೆಲವು ದಿನಗಳ ಹಿಂದೆ ಶೂಟಿಂಗ್ ನಡೆಯುತ್ತಿದ್ದ ಜಾಲಿವುಡ್ ಸ್ಟುಡಿಯೋಸ್‌ಗೆ ಜಿಲ್ಲಾಡಳಿತ ಬೀಗ ಜಡಿದ ಪರಿಣಾಮ, ಬಿಗ್ ಬಾಸ್ ಮನೆಯಿಂದ ಸ್ಪರ್ಧಿಗಳನ್ನು ತಾತ್ಕಾಲಿಕವಾಗಿ ರೆಸಾರ್ಟ್‌ಗೆ ಸ್ಥಳಾಂತರಿಸಲಾಗಿತ್ತು. ಇದೀಗ ಸಮಸ್ಯೆ ಬಗೆಹರಿದು, ಸ್ಪರ್ಧಿಗಳು ಮತ್ತೆ ಬಿಗ್ ಬಾಸ್ ಮನೆಗೆ ವಾಪಸ್ ಆಗಿದ್ದಾರೆ.

ಮನೋರಂಜನೆ ರಾಜ್ಯ