ಕಾಸರಗೋಡು ಶಾಲೆಯೊಂದರಲ್ಲಿ ‘ಪ್ರೋ-ಪ್ಯಾಲೆಸ್ತೈನ್’ ಮೂಕಾಭಿನಯ ನಿಲ್ಲಿಸಿದ ವಿವಾದ – ವಿದ್ಯಾರ್ಥಿ ಸಂಘಟನೆಗಳ ಪ್ರತಿಭಟನೆ, ಪೊಲೀಸರ ಮಧ್ಯಪ್ರವೇಶ

ಕಾಸರಗೋಡು ಶಾಲೆಯೊಂದರಲ್ಲಿ ‘ಪ್ರೋ-ಪ್ಯಾಲೆಸ್ತೈನ್’ ಮೂಕಾಭಿನಯ ನಿಲ್ಲಿಸಿದ ವಿವಾದ – ವಿದ್ಯಾರ್ಥಿ ಸಂಘಟನೆಗಳ ಪ್ರತಿಭಟನೆ, ಪೊಲೀಸರ ಮಧ್ಯಪ್ರವೇಶ

ಕಾಸರಗೋಡು ಜಿಲ್ಲೆಯ ಕುಂಬಳೆ ಸರ್ಕಾರ ಪ್ರೌಢಶಾಲೆಯಲ್ಲಿ ಇತೀಚೆಗೆ ನಡೆದ ಕಲೋತ್ಸವದ ವೇಳೆ ‘ಪ್ರೋ-ಪ್ಯಾಲೆಸ್ತೈನ್’ ಮೂಕಾಭಿನಯ ಪ್ರದರ್ಶನವನ್ನು ನಿಲ್ಲಿಸಲು ಶಿಕ್ಷಕರು ಹೇಳಿದ ಮಾಡಿದ ಹಿನ್ನೆಲೆಯಲ್ಲಿ ಉದ್ವಿಗ್ನತೆ ಉಂಟಾಗಿದೆ.

ಮೂಕಾಭಿನಯ ಪ್ರದರ್ಶನದ ಮಧ್ಯೆ ಇಬ್ಬರು ಶಿಕ್ಷಕರು ವಿದ್ಯಾರ್ಥಿಗಳಿಗೆ ನಿಲ್ಲಿಸಲು ಸೂಚಿಸಿ ವೇದಿಕೆಯ ಪರದೆ ಇಳಿಸಿದ ಘಟನೆ ವಿದ್ಯಾರ್ಥಿಗಳ ಅಸಮಾಧಾನಕ್ಕೆ ಕಾರಣವಾಯಿತು. ಈ ಕ್ರಮದ ವಿರುದ್ಧ ಮುಸ್ಲಿಂ ಸ್ಟುಡೆಂಟ್ಸ್ ಫೆಡರೇಶನ್ (MSF) ಹಾಗೂ ಸ್ಟುಡೆಂಟ್ಸ್ ಫೆಡರೇಶನ್ ಆಫ್ ಇಂಡಿಯಾ (SFI) ಕಾರ್ಯಕರ್ತರು ತೀವ್ರವಾಗಿ ಪ್ರತಿಭಟನೆ ನಡೆಸಿದರು.ಘಟನೆಯ ಬಳಿಕ MSF ಕಾರ್ಯಕರ್ತರು ಪೋಷಕ-ಶಿಕ್ಷಕ ಸಂಘದ (PTA) ಸಭೆಗೆ ನುಗ್ಗಿ ಶಿಕ್ಷಕರ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದರು. ವಿದ್ಯಾರ್ಥಿಗಳನ್ನು ಬಲವಂತವಾಗಿ ಕೊಠಡಿಯಲ್ಲಿ ಕೂಡಿ ಹಾಕಿ ಪ್ರದರ್ಶನ ತಡೆದಿದ್ದಾರೆ ಎಂಬ ಆರೋಪವೂ ಕೇಳಿಬಂದಿದೆ.

ಇದಕ್ಕೆ ಪ್ರತಿಯಾಗಿ SFI ಕಾರ್ಯಕರ್ತರು ಶಾಲೆ ಆವರಣದ ಹೊರಗೆ ಪ್ರತಿಭಟನೆ ನಡೆಸಿದರು. ಸ್ಥಿತಿ ನಿಯಂತ್ರಣ ತಪ್ಪದಂತೆ ಪೊಲೀಸರು ತಕ್ಷಣ ಸ್ಥಳಕ್ಕಾಗಮಿಸಿ ಪ್ರತಿಭಟನಾಕಾರರನ್ನು ತೆರವುಗೊಳಿಸಿ ಶಾಲಾ ಆವರಣದಲ್ಲಿ ಬಿಗಿ ಭದ್ರತೆ ನೀಡಿದ್ದಾರೆ.

ಶಿಕ್ಷಕ-ರಕ್ಷಕ ಸಂಘದ ಅಧಿಕಾರಿಗಳು ಮಧ್ಯಸ್ಥಿಕೆ ವಹಿಸಿದ್ದು, ಕಲೋತ್ಸವವನ್ನು ಪುನರಾರಂಭಿಸಲು ಮತ್ತು ವಿವಾದ ಪರಿಹರಿಸಲು ಪ್ರಯತ್ನಗಳು ನಡೆಯುತ್ತಿವೆ ಎಂದು ತಿಳಿಸಿದ್ದಾರೆ. ಈ ಘಟನೆ ಶಿಕ್ಷಣ ಸಂಸ್ಥೆಗಳಲ್ಲಿ ಅಭಿವ್ಯಕ್ತಿಯ ಸ್ವಾತಂತ್ರ್ಯ ಮತ್ತು ಆಡಳಿತ ನಿಯಂತ್ರಣದ ನಡುವಿನ ನಾಜೂಕಾದ ಸಮತೋಲನದ ಬಗ್ಗೆ ಚರ್ಚೆಗೆ ಕಾರಣವಾಗಿದೆ.

ರಾಷ್ಟ್ರೀಯ ಶೈಕ್ಷಣಿಕ