
ಗಾಂಧೀ ಜಯಂತಿ ಪ್ರಯುಕ್ತ ಸ್ವಚ್ಛ ಭಾರತ ರಸಪ್ರಶ್ನೆ ಸ್ಪರ್ಧೆ – CISCE

ನವದೆಹಲಿ: ಭಾರತ ಶಾಲಾ ಪ್ರಮಾಣಪತ್ರ ಪರೀಕ್ಷಾ ಪರಿಷತ್ (CISCE) MyGov.in ಸಹಯೋಗದೊಂದಿಗೆ ಗಾಂಧೀ ಜಯಂತಿ 2025 ಅಂಗವಾಗಿ ದೇಶಾದ್ಯಂತ ಸ್ವಚ್ಛ ಭಾರತ ರಸಪ್ರಶ್ನೆಸ್ಪರ್ಧೆಯನ್ನು ಪ್ರಾರಂಭಿಸಿದೆ.
ಆರನೇ ತರಗತಿ ಮತ್ತು ಅದಕ್ಕಿಂತ ಮೇಲ್ಪಟ್ಟ ವಿದ್ಯಾರ್ಥಿಗಳು ಸ್ಪರ್ಧೆಯಲ್ಲಿ ಭಾಗವಹಿಸಬಹುದು. 20 ಪ್ರಶ್ನೆಗಳಿಗೆ 10 ನಿಮಿಷಗಳಲ್ಲಿ ಉತ್ತರಿಸಬೇಕು. ಸ್ಪರ್ಧೆಯು ಈಗಾಗಲೇ ಪ್ರಾರಂಭವಾಗಿದ್ದು, ಅಕ್ಟೋಬರ್ 15 ರವರೆಗೆ ನಡೆಯಲಿದೆ.
ಬಹುಮಾನಗಳ ವಿವರ:
- ಪ್ರಥಮ : ₹7,000
- ದ್ವಿತೀಯ : ₹5,000
- ತೃತೀಯ : ₹3,000
- 15 ಪ್ರೋತ್ಸಾಹಕ ಬಹುಮಾನಗಳು : ತಲಾ ₹1,000
ಭಾಗವಹಿಸಿದ ಸ್ಪರ್ಧಿಗಳೆಲ್ಲರಿಗೂ e-ಪ್ರಮಾಣಪತ್ರ ದೊರೆಯಲಿದೆ. ಶಾಲೆಗಳು ಗಾಂಧೀಜಿಯ ಆತ್ಮಕಥೆ The Story of My Experiments with Truth ಓದುವ ಕಾರ್ಯಕ್ರಮಗಳನ್ನು ನಡೆಸಲು ಪ್ರೇರೇಪಿಸಲಾಗಿದೆ.
ಭಾಗವಹಿಸುವ ಆಸಕ್ತಿ ಉಳ್ಳವರು Swacch bharat Quiz ಗೆ ಭೇಟಿ ನೀಡಿ, “Start Quiz” ಕ್ಲಿಕ್ ಮಾಡಿ, ಉತ್ತರಗಳನ್ನು ಸಲ್ಲಿಸಿ.
CISCE ಈ ಮೂಲಕ ದೇಶದ ವಿದ್ಯಾರ್ಥಿಗಳಲ್ಲಿ ಸ್ವಚ್ಛತೆ ಮತ್ತು ನಾಗರಿಕ ಜಾಗೃತಿ ಮೂಡಿಸುವುದಕ್ಕೆ ಮುಂದಾಗಿದೆ.
