ಪಾಕಿಸ್ತಾನದ ಐಎಸ್ಐ ಪರ ಗೂಢಚರ್ಯೆ: ಹರಿಯಾಣ ಯೂಟ್ಯೂಬರ್ ವಾಸಿಂ ಅಕ್ರಂ ಬಂಧನ

ಪಾಕಿಸ್ತಾನದ ಐಎಸ್ಐ ಪರ ಗೂಢಚರ್ಯೆ: ಹರಿಯಾಣ ಯೂಟ್ಯೂಬರ್ ವಾಸಿಂ ಅಕ್ರಂ ಬಂಧನ

ಪಾಕಿಸ್ತಾನದ ಗುಪ್ತಚರ ಸಂಸ್ಥೆ ಐಎಸ್ಐ ಪರವಾಗಿ ಗೂಢಚರ್ಯೆ ನಡೆಸಿದ್ದಾನೆಂಬ ಆರೋಪದ ಮೇರೆಗೆ ಹರಿಯಾಣ ಪೊಲೀಸರವರು ಯೂಟ್ಯೂಬರ್ ವಾಸಿಂ ಅಕ್ರಂ ಅವರನ್ನು ಬಂಧಿಸಿದ್ದಾರೆ.

ಮೇವಾಟ್‌ನ ಇತಿಹಾಸ ಕುರಿತು ಯೂಟ್ಯೂಬ್‌ನಲ್ಲಿ ವೀಡಿಯೊಗಳನ್ನು ಪ್ರಕಟಿಸುತ್ತಿದ್ದ ಅಕ್ರಂ, ಕಳೆದ ಮೂರು ವರ್ಷಗಳಿಂದ ಪಾಕಿಸ್ತಾನಿ ಏಜೆಂಟರೊಂದಿಗೆ ಸಂಪರ್ಕದಲ್ಲಿದ್ದು, ಅವರಿಗೆ ಸಿಮ್ ಕಾರ್ಡ್‌ಗಳನ್ನು ಪೂರೈಸುತ್ತಿದ್ದನೆಂದು ಪೊಲೀಸರು ತಿಳಿಸಿದ್ದಾರೆ. ವಿಚಾರಣೆ ವೇಳೆ ಅಕ್ರಂನ ವಾಟ್ಸಾಪ್ ಚಾಟ್‌ಗಳು ಪತ್ತೆಯಾಗಿದ್ದು, ಅಳಿಸಲ್ಪಟ್ಟ ಕೆಲವು ಸಂದೇಶಗಳನ್ನೂ ಸೈಬರ್ ಸೆಲ್ ಮರುಪಡೆಯುವಲ್ಲಿ ಯಶಸ್ವಿಯಾಗಿದೆ.

ಇದಕ್ಕೂ ಮೊದಲು ಬಂಧಿತನಾಗಿದ್ದ ಮತ್ತೋರ್ವ ಗೂಢಚರ ತೌಫಿಕ್, ಅಕ್ರಂನ ಪಾಕಿಸ್ತಾನದ ಸಂಪರ್ಕವನ್ನು ಬಹಿರಂಗಪಡಿಸಿದ್ದಾನೆ. ಇಬ್ಬರೂ ಆರೋಪಿಗಳು ಐಎಸ್ಐ ಹಾಗೂ ಪಾಕಿಸ್ತಾನ ಹೈ ಕಮಿಷನ್ ಅಧಿಕಾರಿಗಳೊಂದಿಗೆ ಇಂಟರ್‌ನೆಟ್ ಕರೆಗಳ ಮೂಲಕ ಸಂಪರ್ಕ ಕಾಯ್ದುಕೊಂಡಿದ್ದರು ಎಂದು ತನಿಖೆಯಿಂದ ಬೆಳಕಿಗೆ ಬಂದಿದೆ.

ಈ ಪ್ರಕರಣವನ್ನು ಪಲ್ವಾಲ್ ಕ್ರೈಂ ಬ್ರಾಂಚ್ ಹಾಗೂ ಇಂಟೆಲಿಜೆನ್ಸ್ ಬ್ಯೂರೋ ಸಮನ್ವಯದಲ್ಲಿ ತನಿಖೆ ನಡೆಸುತ್ತಿದ್ದು, ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಬಂಧನಗಳು ಸಂಭವಿಸಬಹುದೆಂದು ಪೊಲೀಸರು ತಿಳಿಸಿದ್ದಾರೆ.

ಅಂತರಾಷ್ಟ್ರೀಯ ಅಪರಾಧ