ಅಕ್ಟೋಬರ್ 5 ರಂದು ನಡೆಯಲಿರುವ ಐಸಿಸಿ ಮಹಿಳಾ ವಿಶ್ವಕಪ್ ಪಂದ್ಯದಲ್ಲಿ ಭಾರತ ಮಹಿಳಾ ಕ್ರಿಕೆಟ್ ತಂಡವು ಪಾಕಿಸ್ತಾನ ಆಟಗಾರರೊಂದಿಗೆ ಹಸ್ತಲಾಘವ ಮಾಡಬಾರದು ಎಂದು ಬಿಸಿಸಿಐ ಸೂಚಿಸಿದೆ.

2025ರ ಏಷ್ಯಾ ಕಪ್‌ನಲ್ಲಿ ಭಾರತದ ಪುರುಷರ ತಂಡ ಅನುಸರಿಸಿದ್ದ ರೀತಿಯನ್ನೇ ಇದೀಗ ಮಹಿಳಾ ತಂಡಕ್ಕೂ ಜಾರಿಗೊಳಿಸಲಾಗಿದೆ. ರಾಜಕೀಯ ಒತ್ತಡದ ನಡುವೆ ಈ ತೀರ್ಮಾನ ಕೈಗೊಳ್ಳಲಾಗಿದೆ ಎಂದು ಮೂಲಗಳು ತಿಳಿಸಿವೆ.
ಭಾರತದ ನಾಯಕಿ ಹರ್ಮನ್‌ಪ್ರೀತ್ ಕೌರ್ ಮತ್ತು ಆಲ್‌ರೌಂಡರ್ ದೀಪ್ತಿ ಶರ್ಮಾ ಅವರು, ತಮ್ಮ ಗಮನ ಸಂಪೂರ್ಣವಾಗಿ ಕ್ರೀಡೆಯ ಮೇಲೆಯೇ ಇರುತ್ತದೆ, ಮೈದಾನದ ಹೊರಗಿನ ವಿಷಯಗಳು ತಂಡದ ಮೇಲೆ ಪ್ರಭಾವ ಬೀರುವುದಿಲ್ಲ ಎಂದು ಹೇಳಿದ್ದಾರೆ.
ಇತ್ತ ಪಾಕಿಸ್ತಾನ ತಂಡವು ಈ ವಿಷಯ ಕುರಿತು ಪಿಸಿಬಿಯಿಂದ ಮಾರ್ಗದರ್ಶನ ಕೇಳಿದೆ. ಆದರೆ, ಪಂದ್ಯಾನಂತರ ಹಸ್ತಲಾಘವಕ್ಕೆ ಸಂಬಂಧಿಸಿದಂತೆ ಐಸಿಸಿ ಬಳಿ ಯಾವುದೇ ಅಧಿಕೃತ ಪ್ರೋಟೋಕಾಲ್ ಇಲ್ಲ.

