ಗಾಜಾ ಸಂಘರ್ಷ ಅಂತ್ಯಕ್ಕೆ ಟ್ರಂಪ್ ಶಾಂತಿ ಯೋಜನೆ ಘೋಷಣೆ

ಗಾಜಾ ಸಂಘರ್ಷ ಅಂತ್ಯಕ್ಕೆ ಟ್ರಂಪ್ ಶಾಂತಿ ಯೋಜನೆ ಘೋಷಣೆ

ವಾಷಿಂಗ್ಟನ್: ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹಾಗೂ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ನಡುವಿನ ಭೇಟಿಯ ನಂತರ ಶ್ವೇತಭವನವು ಗಾಜಾ ಸಂಘರ್ಷ ಅಂತ್ಯಗೊಳಿಸಲು ಮಹತ್ವದ ಶಾಂತಿ ಯೋಜನೆಯನ್ನು ಬಿಡುಗಡೆ ಮಾಡಿದೆ. ಕಳೆದ ಎರಡು ವರ್ಷಗಳಿಂದ ಮುಂದುವರಿದಿರುವ ಗಾಜಾ ಯುದ್ಧಕ್ಕೆ ಕೊನೆಗಾಣಿಸುವ ಉದ್ದೇಶದಿಂದ ಈ ಯೋಜನೆ ರೂಪಿಸಲಾಗಿದೆ.

ಯೋಜನೆಯ ಪ್ರಕಾರ ಗಾಜಾವನ್ನು “ಉಗ್ರರಹಿತ, ಶಾಂತ ಪ್ರದೇಶ”ವನ್ನಾಗಿ ಪರಿವರ್ತಿಸಲಾಗುವುದು. ಅಲ್ಲಿನ ಜನರಿಗೆ ಆರ್ಥಿಕ ಪುನರ್‌ನಿರ್ಮಾಣ ಕಾರ್ಯ ಕೈಗೊಳ್ಳಲಾಗುತ್ತದೆ. ಪ್ರಸ್ತಾಪಿತ ಒಪ್ಪಂದವನ್ನು ಇರುವುದುರು ಅಂಗೀಕರಿಸಿದರೆ ತಕ್ಷಣವೇ ಯುದ್ಧ ಸ್ಥಗಿತವಾಗಲಿದೆ.

ಶಾಂತಿ ಯೋಜನೆಯಡಿ:

ಎಲ್ಲಾ ಸೈನಿಕ ದಾಳಿಗಳು, ವೈಮಾನಿಕ ಹಾಗೂ ತೋಪಿನ ದಾಳಿಗಳನ್ನು ತಕ್ಷಣವೇ ನಿಲ್ಲಿಸಲಾಗುವುದು.ಇಸ್ರೇಲ್ ಒಪ್ಪಂದವನ್ನು ಅಧಿಕೃತವಾಗಿ ಘೋಷಿಸಿದ 72 ಗಂಟೆಗಳೊಳಗೆ ಎಲ್ಲಾ ಬಂಧಿತರನ್ನು, ಜೀವಂತ ಹಾಗೂ ಮೃತ ದೇಹಗಳನ್ನು ಹಿಂತಿರುಗಿಸಲಾಗುವುದು.ಬಂಧಿತರಿಂದ ಬಿಡುಗಡೆಗೊಳ್ಳುವವರಲ್ಲಿ 250 ಜೀವಾವಧಿ ಶಿಕ್ಷೆಗೆ ಗುರಿಯಾದ ಕೈದಿಗಳು ಹಾಗೂ ಅಕ್ಟೋಬರ್ 7, 2023 ನಂತರ ಬಂಧಿತರಾದ 1700 ಗಾಜಾದವರು (ಮಹಿಳೆ, ಮಕ್ಕಳು ಸೇರಿದಂತೆ) ಸೇರಿದ್ದಾರೆ.

ಹಮಾಸ್ ಸದಸ್ಯರು ಗಾಜಾವನ್ನು ತೊರೆಯಲು ಬಯಸಿದರೆ, ಅವರಿಗೆ ಸುರಕ್ಷಿತ ಮಾರ್ಗ ಹಾಗೂ ಸ್ವೀಕರಿಸುವ ರಾಷ್ಟ್ರಗಳಿಗೆ ಹೋಗುವ ಅವಕಾಶ ಕಲ್ಪಿಸಲಾಗುವುದು.

ಒಪ್ಪಂದ ಸ್ವೀಕಾರವಾದ ತಕ್ಷಣ ಗಾಜಾಕ್ಕೆ ನೆರವು ಕಳುಹಿಸಲಾಗುವುದು. ಅಲ್ಲದೆ, ಟ್ರಂಪ್ ಆರ್ಥಿಕ ಪುನರ್‌ನಿರ್ಮಾಣ ಯೋಜನೆಯಡಿ ಗಾಜಾವನ್ನು ಅಭಿವೃದ್ಧಿ ಪಡಿಸಲು ತಜ್ಞರ ಸಮಿತಿಯನ್ನು ರಚಿಸಲಾಗುವುದು. ಅಮೆರಿಕಾ, ಅರಬ್ ಹಾಗೂ ಅಂತರರಾಷ್ಟ್ರೀಯ ಪಾಲುದಾರರ ಸಹಯೋಗದೊಂದಿಗೆ ತಾತ್ಕಾಲಿಕ ಅಂತರರಾಷ್ಟ್ರೀಯ ಸ್ಥಿರೀಕರಣ ಪಡೆ (ISF)ಯನ್ನು ಗಾಜಾದಲ್ಲಿ ನಿಯೋಜಿಸಲಾಗುವುದು.

ಅದರೊಂದಿಗೆ, ಇಸ್ರೇಲ್ ಹಾಗೂ ಪ್ಯಾಲೆಸ್ತೀನಿಯರ ನಡುವೆ ಶಾಶ್ವತ ಶಾಂತಿ ಮತ್ತು ಸಮೃದ್ಧ ಸಹಅಸ್ತಿತ್ವ ಸಾಧಿಸಲು ಅಮೆರಿಕಾ ಸಂವಾದ ಪ್ರಕ್ರಿಯೆ ಆರಂಭಿಸಲಿದೆ ಎಂದು ಶಾಂತಿ ಯೋಜನೆ ಸ್ಪಷ್ಟಪಡಿಸಿದೆ.

ಅಂತರಾಷ್ಟ್ರೀಯ