ಏಷ್ಯಾ ಕಪ್ ಟ್ರೋಫಿ ವಿವಾದ: ಪಿಸಿಬಿ ಮುಖ್ಯಸ್ಥರ ವಿರುದ್ಧ ಬಿಸಿಸಿಐ ಆಕ್ರೋಶ

ಏಷ್ಯಾ ಕಪ್ ಟ್ರೋಫಿ ವಿವಾದ: ಪಿಸಿಬಿ ಮುಖ್ಯಸ್ಥರ ವಿರುದ್ಧ ಬಿಸಿಸಿಐ ಆಕ್ರೋಶ

ಏಷ್ಯಾ ಕಪ್ 2025 ಫೈನಲ್ ಬಳಿಕ ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ) ಮುಖ್ಯಸ್ಥ ಹಾಗೂ ಏಷ್ಯನ್ ಕ್ರಿಕೆಟ್ ಕೌನ್ಸಿಲ್ ಅಧ್ಯಕ್ಷ ಮೋಹ್ಸಿನ್ ನಕ್ವಿ ವಿರುದ್ಧ ಬಿಸಿಸಿಐ ಕಾರ್ಯದರ್ಶಿ ದೇವಜಿತ್ ಸೈಕಿಯಾ ಕಿಡಿಕಾರಿದ್ದಾರೆ.

ಫೈನಲ್‌ನಲ್ಲಿ ಭಾರತ ಪಾಕಿಸ್ತಾನವನ್ನು 5 ವಿಕೆಟ್‌ಗಳಿಂದ ಮಣಿಸಿ ಏಷ್ಯಾ ಕಪ್ ಕಿರೀಟವನ್ನು ಗೆದ್ದಿದ್ದರೂ, ಟ್ರೋಫಿ ಹಾಗೂ ಪದಕಗಳನ್ನು ನೀಡುವ ಬದಲಿಗೆ ನಕ್ವಿ ಅವುಗಳನ್ನು ತನ್ನ ಹೋಟೆಲ್‌ ಕೊಠಡಿಗೆ ಕೊಂಡೊಯ್ದಿದ್ದಾರೆ ಎಂದು ಬಿಸಿಸಿಐ ಆರೋಪಿಸಿದೆ.

ಭಾರತದ ಸ್ಪಷ್ಟ ವಿನಂತಿ ಮೇರೆಗೆ ಎಮಿರೇಟ್ಸ್‌ ಬೋರ್ಡ್‌ ಉಪಾಧ್ಯಕ್ಷ ಖಾಲಿದ್ ಅಲ್ ಜರೂನಿ ಅವರಿಂದಲೇ ಟ್ರೋಫಿ ಸ್ವೀಕರಿಸಲು ಬಯಸಿದರೂ, ನಕ್ವಿ ನಿರಾಕರಿಸಿ ವೇದಿಕೆಯಿಂದ ಹೊರಟಿದ್ದಾರೆ.ಈ ಬೆಳವಣಿಗೆ ಹಿನ್ನೆಲೆಯಲ್ಲಿ, ಟ್ರೋಫಿ ಹಾಗೂ ಪದಕವಿಲ್ಲದೆ ಭಾರತ ತಂಡ ಸಂಭ್ರಮಿಸಬೇಕಾದ ಪರಿಸ್ಥಿತಿ ಉಂಟಾಗಿದೆ. “ಇದು ಕ್ರೀಡಾತ್ಮಕತೆಯಿಲ್ಲದ ಮತ್ತು ದುರ್ಭಾಗ್ಯಕರ ನಡೆ” ಎಂದು ಸೈಕಿಯಾ ಹೇಳಿದ್ದಾರೆ.ಇದಲ್ಲದೆ, ಈ ವಿಷಯವನ್ನು ನವೆಂಬರ್‌ನಲ್ಲಿ ನಡೆಯಲಿರುವ ಐಸಿಸಿ ಸಭೆಯಲ್ಲಿ ಬಿಸಿಸಿಐ ಗಂಭೀರವಾಗಿ ಪ್ರಸ್ತಾಪಿಸಲಿದೆ ಹಾಗೂ ತಕ್ಷಣವೇ ಟ್ರೋಫಿ ಮತ್ತು ಪದಕಗಳನ್ನು ಭಾರತಕ್ಕೆ ಹಸ್ತಾಂತರಿಸಬೇಕು ಎಂದು ಆಗ್ರಹಿಸಿದೆ.

ಅಂತರಾಷ್ಟ್ರೀಯ ಕ್ರೀಡೆ