ದುಬೈ:
ಏಷ್ಯಾ ಕಪ್ 2025 ಫೈನಲ್‌ನಲ್ಲಿ ಕ್ಷಣ ಕ್ಷಣದ ತಿರುವಿನೊಂದಿಗೆ ಪಾಕಿಸ್ತಾನವನ್ನು ಸೋಲಿಸಿ 9ನೇ ಬಾರಿಗೆ ಪ್ರಶಸ್ತಿ ಗಿಟ್ಟಿಸಿದ ಭಾರತ, ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಹೊಸ ಸಂಚಲನ ಮೂಡಿಸಿದೆ. ಟ್ರೋಫಿ ಪ್ರದಾನ ಸಂದರ್ಭದಲ್ಲಿ, ನಾಯಕ ಸೂರ್ಯಕುಮಾರ್ ಯಾದವ್ ನೇತೃತ್ವದ ಟೀಮ್ ಇಂಡಿಯಾ ಪಿಸಿಬಿ ಅಧ್ಯಕ್ಷರಿಂದ ಟ್ರೋಫಿ ಸ್ವೀಕರಿಸಲು ನಿರಾಕರಿಸಿದ ಘಟನೆ ಈಗ ವಿಶ್ವ ಕ್ರಿಕೆಟ್‌ನಲ್ಲಿ ಸಂಚಲನ ಮೂಡಿಸಿದೆ.

▪️ಕಾರ್ಯಕ್ರಮದಲ್ಲಿ ಏನಾಯ್ತು?
ಪಂದ್ಯ ಮುಗಿದ ನಂತರದ ಟ್ರೋಫಿ ಪ್ರದಾನ ಸಮಾರಂಭ ಒಂದು ಗಂಟೆಗೂ ಹೆಚ್ಚು ವಿಳಂಬವಾಯಿತು. ಏಷ್ಯನ್ ಕ್ರಿಕೆಟ್ ಕೌನ್ಸಿಲ್ ಅಧ್ಯಕ್ಷ ಹಾಗೂ ಪಾಕಿಸ್ತಾನ ಒಳಾಂಗಣ ಸಚಿವ ಮೊಹ್ಸಿನ್ ನಕ್ವಿ ಟ್ರೋಫಿ ಹಸ್ತಾಂತರಿಸಲು ಸಿದ್ಧರಾಗಿದ್ದರು. ಆದರೆ, ಭಾರತೀಯ ಆಟಗಾರರು ತಮ್ಮ ಪದಕ ಮತ್ತು ಟ್ರೋಫಿ ಸ್ವೀಕರಿಸದೆ ನೇರವಾಗಿ ಮೈದಾನದಲ್ಲೇ ಚಾಂಪಿಯನ್ಸ್ ಬ್ಯಾನರ್ ಜೊತೆ ಸಂಭ್ರಮಾಚರಣೆ ನಡೆಸಿದರು.

🔸ಅಭಿಮಾನಿಗಳ ಪ್ರತಿಕ್ರಿಯೆ
ಕೆಲವರು ಭಾರತ ತಂಡದ ಈ ನಿರ್ಧಾರವನ್ನು “ಗೌರವದ ನಿಲುವು” ಎಂದು ಶ್ಲಾಘಿಸಿದ್ದಾರೆ.

ಇನ್ನೂ ಕೆಲವರು ಇದನ್ನು “ಕ್ರಿಕೆಟ್ ಕ್ರೀಡಾಸ್ಪೂರ್ತಿಗೆ ಧಕ್ಕೆ” ಎಂದು ಟೀಕಿಸಿದ್ದಾರೆ.
ಸಾಮಾಜಿಕ ಜಾಲತಾಣಗಳಲ್ಲಿ ಈ ಘಟನೆ ಕುರಿತ ಭಾರೀ ಪ್ರಮಾಣದಲ್ಲಿ ಚರ್ಚೆ ನಡೆಯುತ್ತಿದೆ.

