ಸ್ಪೀಡ್ ಪೋಸ್ಟ್: ದರ ಪರಷ್ಕರಣೆ,ಆನ್‌ಲೈನ್ ಪಾವತಿ, ರಿಯಲ್-ಟೈಮ್ ಅಪ್ಡೇಟ್‌ಗಳೊಂದಿಗೆ ಅಕ್ಟೋಬರ್ 1ರಿಂದ ಜಾರಿಗೆ

ಸ್ಪೀಡ್ ಪೋಸ್ಟ್: ದರ ಪರಷ್ಕರಣೆ,ಆನ್‌ಲೈನ್ ಪಾವತಿ, ರಿಯಲ್-ಟೈಮ್ ಅಪ್ಡೇಟ್‌ಗಳೊಂದಿಗೆ ಅಕ್ಟೋಬರ್ 1ರಿಂದ ಜಾರಿಗೆ

ಭಾರತೀಯ ಅಂಚೆ ಇಲಾಖೆ ಪರಿಚಯಿಸಿದ ಸ್ಪೀಡ್ ಪೋಸ್ಟ್ ಸೇವೆ 1986ರ ಆಗಸ್ಟ್ 1ರಂದು ಪ್ರಾರಂಭಗೊಂಡು, ದೇಶದಾದ್ಯಂತ ವೇಗದ ಮತ್ತು ವಿಶ್ವಾಸಾರ್ಹ ಅಂಚೆ ಸೇವೆಯಾಗಿ ತನ್ನ ಸ್ಥಾನವನ್ನು ಗಟ್ಟಿಗೊಳಿಸಿಕೊಂಡಿದೆ. ಖಾಸಗಿ ಕೋರಿಯರ್ ಕಂಪನಿಗಳ ಸ್ಪರ್ಧೆಯಲ್ಲಿಯೂ ಸ್ಪೀಡ್ ಪೋಸ್ಟ್ ಜನಪ್ರಿಯತೆಯನ್ನು ಕಾಪಾಡಿಕೊಂಡಿದ್ದು, ಇದೀಗ ಗ್ರಾಹಕರ ಅಗತ್ಯಗಳನ್ನು ಪೂರೈಸಲು ಆಧುನಿಕ ರೂಪದಲ್ಲಿ ಮತ್ತಷ್ಟು ಬಲಪಡಿಸಲಾಗಿದೆ.

ಸ್ಪೀಡ್ ಪೋಸ್ಟ್‌ಗೆ ಹೊಸ ವೈಶಿಷ್ಟ್ಯಗಳು ಸೇರಿಸಲಾಗಿದ್ದು, ಗ್ರಾಹಕರಿಗೆ ಸುಲಭ ಹಾಗೂ ಭದ್ರಿತ ಸೇವೆ ನೀಡುವ ಉದ್ದೇಶ ಹೊಂದಿದೆ. ಅವುಗಳಲ್ಲಿ –

▪️ಒಟಿಪಿ ಆಧಾರಿತ ಸುರಕ್ಷಿತ ವಿತರಣೆ

▪️ಆನ್‌ಲೈನ್ ಪಾವತಿ ಸೌಲಭ್ಯ

▪️ಎಸ್‌ಎಂಎಸ್ ಆಧಾರಿತ ವಿತರಣಾ ಮಾಹಿತಿ

▪️ಸುಲಭ ಆನ್‌ಲೈನ್ ಬುಕಿಂಗ್

▪️ನೈಜ-ಕಾಲ ವಿತರಣಾ ನವೀಕರಣ

▪️ಗ್ರಾಹಕರಿಗೆ ನೋಂದಣಿ ಸೌಲಭ್ಯ

ಸ್ಪೀಡ್ ಪೋಸ್ಟ್ ದರ ಪರಿಷ್ಕರಣೆ
ಅಂತರ್‌ದೇಶೀಯ (Inland) ಸ್ಪೀಡ್ ಪೋಸ್ಟ್ ಶುಲ್ಕವನ್ನು ಕೊನೆಯಾಗಿ 2012ರ ಅಕ್ಟೋಬರ್‌ನಲ್ಲಿ ಪರಿಷ್ಕರಿಸಲಾಗಿತ್ತು. ಇದೀಗ ಹೆಚ್ಚುತ್ತಿರುವ ಕಾರ್ಯಾಚರಣಾ ವೆಚ್ಚ ಹಾಗೂ ತಾಂತ್ರಿಕ ಸುಧಾರಣೆಗಳಿಗೆ ಹೂಡಿಕೆ ಮಾಡಲು, ದರಗಳನ್ನು ಯುಕ್ತಿಯಾಗಿ ಪರಿಷ್ಕರಿಸಲಾಗಿದೆ. ಹೊಸ ದರಗಳು 2025ರ ಅಕ್ಟೋಬರ್ 1ರಿಂದ ಜಾರಿಗೆ ಬರುತ್ತವೆ.

🔸ಹೊಸ ದರಪಟ್ಟಿ (ಡಾಕ್ಯುಮೆಂಟ್‌ಗಳಿಗೆ ಮಾತ್ರ):

▪️50 ಗ್ರಾಂವರೆಗೆ: ಸ್ಥಳೀಯ ₹19, 200 ಕಿಮೀ ಒಳಗೆ ₹47, ಇತರ ಎಲ್ಲಾ ದೂರಗಳಿಗೆ ₹47

▪️51 ರಿಂದ 250 ಗ್ರಾಂವರೆಗೆ: ಸ್ಥಳೀಯ ₹24, 200 ಕಿಮೀ ಒಳಗೆ ₹59–77

▪️251 ರಿಂದ 500 ಗ್ರಾಂವರೆಗೆ: ಸ್ಥಳೀಯ ₹28, 200 ಕಿಮೀ ಒಳಗೆ ₹70–93
(ಎಲ್ಲಾ ದರಗಳಿಗೆ ಹೆಚ್ಚುವರಿ ಜಿಎಸ್‌ಟಿ ಅನ್ವಯಿಸುತ್ತದೆ)

🔸ಹೆಚ್ಚುವರಿ ಮೌಲ್ಯವರ್ಧಿತ ಸೇವೆಗಳು:

▪️ನೋಂದಣಿ (Registration): ಪ್ರತಿ ಐಟಂಗೆ ₹5 + ಜಿಎಸ್‌ಟಿ (ವಿಳಾಸದಾತ ಅಥವಾ ಅಧಿಕೃತ ವ್ಯಕ್ತಿಗೇ ವಿತರಣೆ)

▪️ಒಟಿಪಿ ವಿತರಣೆ (OTP Delivery): ಪ್ರತಿ ಐಟಂಗೆ ₹5 + ಜಿಎಸ್‌ಟಿ (ಒಟಿಪಿ ದೃಢೀಕರಣದ ನಂತರ ಮಾತ್ರ ವಿತರಣೆ)

🔸ರಿಯಾಯಿತಿ ಯೋಜನೆಗಳು:

▪️ವಿದ್ಯಾರ್ಥಿಗಳಿಗೆ ಸ್ಪೀಡ್ ಪೋಸ್ಟ್ ದರದಲ್ಲಿ 10% ರಿಯಾಯಿತಿ

▪️ಹೊಸ ದೊಡ್ಡಮಟ್ಟದ ಗ್ರಾಹಕರಿಗೆ 5% ವಿಶೇಷ ರಿಯಾಯಿತಿ

ಅಂಚೆ ಇಲಾಖೆ ತಿಳಿಸಿದಂತೆ, ಈ ಎಲ್ಲಾ ಕ್ರಮಗಳು ಸ್ಪೀಡ್ ಪೋಸ್ಟ್ ಸೇವೆಯನ್ನು ಹೆಚ್ಚು ಸುರಕ್ಷಿತ, ಪಾರದರ್ಶಕ ಮತ್ತು ತಂತ್ರಜ್ಞಾನಾಧಾರಿತವಾಗಿಸಲು ಕೈಗೊಂಡ ಪ್ರಯತ್ನಗಳಾಗಿವೆ. ಗ್ರಾಹಕರ ವಿಶ್ವಾಸಕ್ಕೆ ತಕ್ಕಂತೆ, ಭಾರತತೀಯ ಅಂಚೆ ತನ್ನ ಸೇವೆಗಳನ್ನು ನಿರಂತರವಾಗಿ ಸುಧಾರಿಸಿಕೊಳ್ಳುತ್ತಿದೆ ಎಂದು ಇಲಾಖೆ ಸ್ಪಷ್ಟಪಡಿಸಿದೆ.

ರಾಷ್ಟ್ರೀಯ