ಭಾರತ Vs ಪಾಕಿಸ್ತಾನ ಏಷ್ಯಾ ಕಪ್ ಫೈನಲ್: ಎಲ್ಲಿ ನಡೆಯಲಿದೆ? ಯಾವಾಗ ಆರಂಭ? ಲೈವ್ ನೋಡೋದು ಹೇಗೆ?

ಭಾರತ Vs ಪಾಕಿಸ್ತಾನ ಏಷ್ಯಾ ಕಪ್ ಫೈನಲ್: ಎಲ್ಲಿ ನಡೆಯಲಿದೆ? ಯಾವಾಗ ಆರಂಭ? ಲೈವ್ ನೋಡೋದು ಹೇಗೆ?

ದುಬೈ: ಭಾನುವಾರ (ಸೆಪ್ಟೆಂಬರ್ 28) ಕ್ರಿಕೆಟ್ ಅಭಿಮಾನಿಗಳು ಕಾಯುತ್ತಿರುವ ಮಹತ್ವದ ಕ್ಷಣ ಸಾಕಾರವಾಗಲಿದೆ. 41 ವರ್ಷಗಳ ಏಷ್ಯಾ ಕಪ್ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಭಾರತ ಮತ್ತು ಪಾಕಿಸ್ತಾನ ಫೈನಲ್‌ನಲ್ಲಿ ಮುಖಾಮುಖಿಯಾಗುತ್ತಿದ್ದಾರೆ.

ಏಷ್ಯಾ ಕಪ್‌ನಲ್ಲಿ ಎಂಟು ಬಾರಿ ಪ್ರಶಸ್ತಿ ಮುಡಿಗೇರಿಸಿಕೊಂಡಿರುವ ಭಾರತ, ಇದುವರೆಗೆ ಎರಡು ಬಾರಿ ಟ್ರೋಫಿ ಗೆದ್ದಿರುವ ಪಾಕಿಸ್ತಾನವನ್ನು ಎದುರಿಸಲು ಸಜ್ಜಾಗಿದೆ. ಆದರೆ ಇಷ್ಟು ವರ್ಷಗಳಲ್ಲಿ ಒಮ್ಮೆಯೂ ಫೈನಲ್‌ನಲ್ಲಿ ಈ ಎರಡೂ ತಂಡಗಳು ಮುಖಾಮುಖಿಯಾಗಿಲ್ಲ. ಆದ್ದರಿಂದಲೇ ಈ ಪಂದ್ಯ ಅಭಿಮಾನಿಗಳಿಗೆ ವಿಶೇಷ ಉತ್ಸಾಹ ತುಂಬಿದೆ.

🏏 ಭಾರತ Vs ಪಾಕಿಸ್ತಾನ ಏಷ್ಯಾ ಕಪ್ 2025 ಫೈನಲ್

📍 ಸ್ಥಳ: ದುಬೈ ಇಂಟರ್‌ನ್ಯಾಷನಲ್ ಸ್ಟೇಡಿಯಂ
📅 ದಿನಾಂಕ: ಸೆಪ್ಟೆಂಬರ್ 28, ಭಾನುವಾರ
⏰ ಟಾಸ್: ಸಂಜೆ 7:30 (IST)
⏰ ಮೊದಲ ಚೆಂಡು: ರಾತ್ರಿ 8:00 (IST)

🎥 ಲೈವ್ ಪ್ರಸಾರ ಮತ್ತು ಸ್ಟ್ರೀಮಿಂಗ್ –

ಭಾರತೀಯ ಅಭಿಮಾನಿಗಳು ಸೋನಿ ಸ್ಪೋರ್ಟ್ಸ್ ನೆಟ್ವರ್ಕ್ ಮೂಲಕ ನೇರ ಪ್ರಸಾರ ವೀಕ್ಷಿಸಬಹುದು. ಜೊತೆಗೆ, ಸೋನಿ ಲಿವ್ (SonyLIV) ಆಪ್‌ನಲ್ಲಿ ಪಂದ್ಯವನ್ನು ಲೈವ್ ಸ್ಟ್ರೀಮಿಂಗ್ ಮಾಡಲಾಗುತ್ತದೆ.

ಕ್ರಿಕೆಟ್ ಲೋಕದಲ್ಲೇ ಅತ್ಯಂತ ಕಾದು ನೋಡುವ ಭಾರತ-ಪಾಕಿಸ್ತಾನ ಪಂದ್ಯ, ಇಂದು ಫೈನಲ್ಸ್ ಆಗಿರುವುದರಿಂದ ಇನ್ನಷ್ಟು ಕುತೂಹಲ ಹೆಚ್ಚಿಸಿದೆ. ಅಭಿಮಾನಿಗಳಿಗೆ ಭಾನುವಾರ ಕ್ರಿಕೆಟ್ ಹಬ್ಬವೇ ಸರಿ.

ಅಂತರಾಷ್ಟ್ರೀಯ ಕ್ರೀಡೆ