ಇಂದು ನಡೆದ ಬೋರ್ಡ್ ಆಫ್ ಕಂಟ್ರೋಲ್ ಫಾರ್ ಕ್ರಿಕೆಟ್ ಇನ್ ಇಂಡಿಯಾ (ಬಿಸಿಸಿಐ) ವಾರ್ಷಿಕ ಸಾಮಾನ್ಯ ಸಭೆಯಲ್ಲಿ ದೆಹಲಿಯ ಮಾಜಿ ನಾಯಕ ಮಿಥುನ್ ಮನ್ಹಾಸ್ ಅವರನ್ನು ಹೊಸ ಅಧ್ಯಕ್ಷರಾಗಿ ಆಯ್ಕೆ ಮಾಡಲಾಗಿದೆ. ಅವರು ಬೋರ್ಡ್‌ನ 37ನೇ ಅಧ್ಯಕ್ಷರಾಗಿದ್ದಾರೆ. ಕಳೆದ ತಿಂಗಳು 70 ವರ್ಷ ಪೂರೈಸಿದ ಕಾರಣ ಸ್ಥಾನಕ್ಕೆ ರಾಜೀನಾಮೆ ನೀಡಿದ ರೋಜರ್ ಬಿನ್ನಿ ಅವರ ಮನ್ಹಾಸ್ ಅಧಿಕಾರ ಸ್ವೀಕರಿಸಿದ್ದಾರೆ.

▪️ಈ ಬಾರಿ ಬಿಸಿಸಿಐಯ ಹೊಸ ಅಧಿಕಾರಿಗಳ ಆಯ್ಕೆಯೂ ನಡೆದಿದ್ದು, ಹೀಗಿದೆ ಪಟ್ಟಿ –
ಅಧ್ಯಕ್ಷರು: ಮಿಥುನ್ ಮನ್ಹಾಸ್
ಉಪಾಧ್ಯಕ್ಷರು: ರಾಜೀವ್ ಶುಕ್ಲಾ
ಕಾರ್ಯದರ್ಶಿ: ದೇವಜಿತ್ ಸೈಕಿಯಾ
ಸಂಯುಕ್ತ ಕಾರ್ಯದರ್ಶಿ: ಪ್ರಭ್‌ತೇಜ್ ಭಾಟಿಯಾ
ಖಜಾಂಚಿ: ಎ. ರಘುರಾಮ ಭಟ್
ಮಾಜಿ ಆಲ್‌ರೌಂಡರ್ ಆಗಿರುವ ಮನ್ಹಾಸ್, ಈ ತಿಂಗಳ ಆರಂಭದಲ್ಲಿ ನವದೆಹಲಿಯಲ್ಲಿ ನಡೆದ ಪ್ರಮುಖ ಹಿತಾಸಕ್ತಿ ಹೊಂದಿದವರ ಸಭೆಯಲ್ಲಿ ಏಕಮತದ ಅಭ್ಯರ್ಥಿಯಾಗಿ ಹೊರಹೊಮ್ಮಿದ್ದರು.
ಹೊಸ ತಂಡ ಅಧಿಕಾರ ಸ್ವೀಕರಿಸಿರುವುದರಿಂದ ಭಾರತೀಯ ಕ್ರಿಕೆಟ್ ಆಡಳಿತದಲ್ಲಿ ಹೊಸ ಅಧ್ಯಾಯ ಆರಂಭವಾಗಲಿದೆ ಎಂಬ ನಿರೀಕ್ಷೆ ವ್ಯಕ್ತವಾಗಿದೆ.

