ಏಷ್ಯಾ ಕಪ್‌ ಫೈನಲ್‌ : ಟಾಸ್ ಗೆದ್ದ ಭಾರತ  ಬೌಲಿಂಗ್ ಆಯ್ಕೆ

ಏಷ್ಯಾ ಕಪ್‌ ಫೈನಲ್‌ : ಟಾಸ್ ಗೆದ್ದ ಭಾರತ ಬೌಲಿಂಗ್ ಆಯ್ಕೆ

ದುಬೈ ಅಂತರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಏಷ್ಯಾ ಕಪ್ 2025 ಫೈನಲ್ ಪಂದ್ಯದಲ್ಲಿ ಭಾರತ ಮತ್ತು ಪಾಕಿಸ್ತಾನ ಮುಖಾಮುಖಿಯಾಗಿವೆ. ಭಾರತ ನಾಯಕ ಸೂರ್ಯಕುಮಾರ್ ಯಾದವ್ ಟಾಸ್ ಗೆದ್ದು ಮೊದಲು ಬೌಲಿಂಗ್ ಮಾಡಲು ತೀರ್ಮಾನಿಸಿದ್ದಾರೆ.

ಭಾರತದ ಪರ ಕೆಲವು ಬದಲಾವಣೆಗಳು ನಡೆದಿದೆ. ಹಾರ್ದಿಕ್ ಪಾಂಡ್ಯಾ ಸಣ್ಣ ಗಾಯದ ಕಾರಣ ತಂಡದಿಂದ ಹೊರಬಿದ್ದು, ಅವರ ಬದಲಿಗೆ ರಿಂಕು ಸಿಂಗ್ ಸೇರಿಕೊಂಡಿದ್ದಾರೆ. ಜೊತೆಗೆ ಜಸ್ಪ್ರಿತ್ ಬುಮ್ರಾ ಮತ್ತು ಶಿವಂ ದುಬೆ ತಂಡಕ್ಕೆ ಮರಳಿದ್ದಾರೆ.

ಈ ಪಂದ್ಯವು 15 ದಿನಗಳೊಳಗೆ ಭಾರತ–ಪಾಕಿಸ್ತಾನ ನಡುವೆ ನಡೆಯುತ್ತಿರುವ ಮೂರನೇ ಕದನ. ಮುಂಚಿನ ಎರಡು ಪಂದ್ಯಗಳಲ್ಲಿ ಭಾರತವು ಸಂಪೂರ್ಣ ಪ್ರಾಬಲ್ಯ ಸಾಧಿಸಿತ್ತು, ಗುಂಪು ಹಂತದಲ್ಲಿ 7 ವಿಕೆಟ್‌ಗಳಿಂದ ಹಾಗೂ ಸೂಪರ್-4 ಹಂತದಲ್ಲಿ 6 ವಿಕೆಟ್‌ಗಳಿಂದ ಪಾಕಿಸ್ತಾನವನ್ನು ಸೋಲಿಸಿತ್ತು.

ಆದರೆ ಸೂಪರ್-4 ಹಂತದ ಕೊನೆಯ ಪಂದ್ಯದಲ್ಲಿ ಶ್ರೀಲಂಕಾ ವಿರುದ್ಧ ಭಾರತ ಕಷ್ಟಪಟ್ಟು ಗೆದ್ದ ವಿಚಾರ ಮರೆಯುವಂತಿಲ್ಲ. ಪಾಕಿಸ್ತಾನವನ್ನು ಇತ್ತೀಚೆಗೆ ತೀವ್ರವಾಗಿ ಹಿಮ್ಮೆಟ್ಟಿಸಿದರೂ “ಪಾಕಿಸ್ತಾನ ಈಗ ನಮ್ಮ ಪ್ರತಿಸ್ಪರ್ಧಿಯೇ ಅಲ್ಲ” ಎಂದು ನಾಯಕ ಸೂರ್ಯಕುಮಾರ್ ಯಾದವ್ ಘೋಷಿಸಿದ್ದರೂ, ಫೈನಲ್‌ ಆಗಿರುವುದರಿಂದ ಕಡೆಗಣಿಸುವಂತಿಲ್ಲ.

ಈ ಮೊದಲು ನಡೆದ ಐದು ಅಥವಾ ಹೆಚ್ಚು ತಂಡಗಳ ಟೂರ್ನಮೆಂಟ್‌ ಫೈನಲ್‌ಗಳಲ್ಲಿ ಭಾರತ–ಪಾಕಿಸ್ತಾನ ಆರು ಬಾರಿ ಎದುರಾಗಿದ್ದು, ಪಾಕಿಸ್ತಾನ 3-2 ಅಂತರದಲ್ಲಿ ಮುನ್ನಡೆ ಸಾಧಿಸಿದೆ.

👉 ಭಾರತ ತಂಡ: ಅಭಿಷೇಕ್ ಶರ್ಮಾ, ಶುಭ್‌ಮನ್ ಗಿಲ್, ಸೂರ್ಯಕುಮಾರ್ ಯಾದವ್(ನಾಯಕ), ತಿಲಕ್ ವರ್ಮಾ, ಸಂಜು ಸ್ಯಾಮ್ಸನ್(ವಿಕೆಟ್‌ ಕೀಪರ್), ಹಾರ್ದಿಕ್ ಪಾಂಡ್ಯಾ, ಅಕ್ಷರ್ ಪಟೇಲ್, ಹರ್ಷಿತ್ ರಾಣಾ, ಕುಲದೀಪ್ ಯಾದವ್, ಅರ್ಶದೀಪ್ ಸಿಂಗ್, ವರೂಣ್ ಚಕ್ರವರ್ತಿ, ಜಸ್ಪ್ರಿತ್ ಬುಮ್ರಾ, ಜಿತೇಶ್ ಶರ್ಮಾ, ರಿಂಕು ಸಿಂಗ್, ಶಿವಂ ದುಬೆ.

👉 ಪಾಕಿಸ್ತಾನ ತಂಡ: ಸಾಹಿಬ್‌ಜಾದ ಫರ್ಹಾನ್, ಫಖರ್ ಜಮಾನ, ಸೈಮ್ ಆಯುಬ್, ಸಲ್ಮಾನ್ ಆಗಾ(ನಾಯಕ), ಹುಸೈನ್ ತಲಾತ್, ಮೊಹಮ್ಮದ್ ಹಾರಿಸ್(ವಿಕೆಟ್‌ ಕೀಪರ್), ಮೊಹಮ್ಮದ್ ನವಾಜ್, ಫಹೀಮ್ ಅಶ್ರಫ್, ಶಾಹೀನ್ ಅಫ್ರಿದಿ, ಹಾರಿಸ್ ರೌಫ್, ಅಬ್ರಾರ್ ಅಹಮದ್, ಹಸನ್ ಅಲಿ, ಖುಶ್ದಿಲ್ ಶಾ, ಮೊಹಮ್ಮದ್ ವಸೀಮ್ ಜೂ., ಸಲ್ಮಾನ್ ಮಿರ್ಜಾ, ಹಸನ್ ನವಾಜ್, ಸುಫಿಯಾನ್ ಮುಕೀಮ್.

ಅಂತರಾಷ್ಟ್ರೀಯ ಕ್ರೀಡೆ