ಏಷ್ಯಾ ಕಪ್ ಕ್ರಿಕೆಟ್ ಟೂರ್ನಿಯಲ್ಲಿ ಭಾರತ ತನ್ನ ಅಜೇಯ ದಾಖಲೆ ಮುಂದುವರಿಸಿಕೊಂಡಿದೆ. ನಿನ್ನೆ ರಾತ್ರಿ ಶ್ರೀಲಂಕಾ ವಿರುದ್ಧ ನಡೆದ ರೋಚಕ ಪಂದ್ಯ ಸೂಪರ್ ಓವರ್‌ಗೆ ಸಾಗಿದರೂ, ಅದರಲ್ಲಿ ಭಾರತ ತನ್ನ ಚಾಂಪಿಯನ್ ಶಕ್ತಿ ತೋರಿತು.

ಮೊದಲು ಬ್ಯಾಟಿಂಗ್ ನಡೆಸಿದ ಭಾರತ 202 ರನ್‌ಗಳನ್ನು ಕಲೆಹಾಕಿ ಶ್ರೀಲಂಕಾಗೆ 203 ರನ್ ಗುರಿ ನೀಡಿತು. ಪ್ರತಿಯಾಗಿ ಬ್ಯಾಟಿಂಗ್‌ಗೆ ಬಂದ ಲಂಕಾ ತಂಡ ದ್ವಿತೀಯ ವಿಕೆಟ್‌ಗೆ 127 ರನ್‌ಗಳ ಭರ್ಜರಿ ಜೊತೆಯಾಟ ಕಟ್ಟಿಕೊಂಡು ಭಾರತವನ್ನು ಒತ್ತಡಕ್ಕೆ ತಳ್ಳಿತು. ಅಂತಿಮವಾಗಿ ಶ್ರೀಲಂಕಾ ಕೂಡ 202 ರನ್ ಗಳಿಸಿ ಪಂದ್ಯ ಟೈ ಆಯಿತು.
ಸೂಪರ್ ಓವರ್‌ನಲ್ಲಿ ಭಾರತ ಬೌಲರ್‌ಗಳು ಕೇವಲ 2 ರನ್‌ಗಳಿಗೆ ಶ್ರೀಲಂಕಾವನ್ನು ಸೀಮಿತಗೊಳಿಸಿದರು. ನಂತರ ಬ್ಯಾಟಿಂಗ್‌ಗೆ ಬಂದ ಭಾರತ ಕೇವಲ ಒಂದು ಎಸೆತದಲ್ಲೇ ಗುರಿ ತಲುಪಿ ಪಂದ್ಯವನ್ನು ಗೆದ್ದಿತು. ನಾಯಕ ಸೂರ್ಯಕುಮಾರ ಯಾದವ್ ಬ್ಯಾಟಿಂಗ್‌ನಲ್ಲಿ ಉತ್ತಮ ಪ್ರದರ್ಶನ ನೀಡಿ ಜಯ ಖಚಿತಪಡಿಸಿದರು.
ಈ ಜಯದೊಂದಿಗೆ ಭಾರತ ಟೂರ್ನಿಯಲ್ಲಿ ಅಜೇಯವಾಗಿ ಉಳಿದ ಏಕೈಕ ತಂಡವಾಗಿವಾಗಿದೆ.

