ವಿವಾದಾತ್ಮಕ ಟೀ-ಶರ್ಟ್ ಧರಿಸಿ ನಗರದಲ್ಲಿ ಓಡಾಡಿದ ವ್ಯಕ್ತಿ: ಸಾಮಾಜಿಕ ಜಾಲತಾಣಗಳಲ್ಲಿ ಆಕ್ರೋಶ

ವಿವಾದಾತ್ಮಕ ಟೀ-ಶರ್ಟ್ ಧರಿಸಿ ನಗರದಲ್ಲಿ ಓಡಾಡಿದ ವ್ಯಕ್ತಿ: ಸಾಮಾಜಿಕ ಜಾಲತಾಣಗಳಲ್ಲಿ ಆಕ್ರೋಶ

ಬೆಂಗಳೂರು ನಗರದ ಬೀದಿಗಳಲ್ಲಿ ಸಂಭವಿಸಿದ ಘಟನೆ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ. ಕಾಶ್ಮೀರ ಪ್ರದೇಶದ ತಪ್ಪಾದ ನಕ್ಷೆ ಹಾಗೂ ‘ಆಜಾದ್ ಕಾಶ್ಮೀರ್ ಚಳವಳಿ’ಗೆ ಸಂಬಂಧಿಸಿದ ಧ್ವಜದ ಚಿತ್ರವಿರುವ ಟೀ-ಶರ್ಟ್ ಧರಿಸಿದ್ದ ವ್ಯಕ್ತಿಯನ್ನು ನಗರದಲ್ಲಿ ಬೈಕ್‌ನಲ್ಲಿ ಸಹ ಸವಾರಾನಾಗಿ ಸಂಚರಿಸುತ್ತಿರುವುದನ್ನು ನಾಗರಿಕರು ಕ್ಯಾಮರಾದಲ್ಲಿ ಸೆರೆಹಿಡಿದಿದ್ದಾರೆ. ಈ ನಕ್ಷೆಯಲ್ಲಿ ಪಾಕಿಸ್ತಾನ ಆಕ್ರಮಿತ ಕಾಶ್ಮೀರ (POK) ಕೂಡ ಚಿತ್ರಿಸಲ್ಪಟ್ಟಿದ್ದು ಜನರಲ್ಲಿ ಆಕ್ರೋಶ ಹುಟ್ಟಿಸಿದೆ.

ಈ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ಕ್ಷಣಾರ್ಧದಲ್ಲಿ ವೈರಲ್ ಆಗಿ, ಅನೇಕರು ಇದನ್ನು ರಾಷ್ಟ್ರ ವಿರೋಧಿ ಕಾರ್ಯ, ಕಠಿಣ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ. ವಿಡಿಯೋವನ್ನು ಶೂಟ್ ಮಾಡಿದ ಪ್ರಯಾಣಿಕರು ಬೈಕ್‌ನ ವಾಹನ ಸಂಖ್ಯೆಯನ್ನೂ ದಾಖಲಿಸಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಇದಕ್ಕೆ ಪ್ರತಿಕ್ರಿಯಿಸಿದ ಬೆಂಗಳೂರು ಟ್ರಾಫಿಕ್ ಪೊಲೀಸರು, ನಾಗರಿಕರು ಇಂತಹ ಘಟನೆಗಳನ್ನು ASTraM ಆಪ್ ಮೂಲಕ ವರದಿ ಮಾಡಲು ಸೂಚಿಸಿದ್ದಾರೆ.

ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಬೈಕ್ ಮಾಲೀಕರು ಸುಧೀಪ್ ಶ್ರೇಷ್ಟಾ ಆಗಿರಬಹುದೆಂಬ ಊಹಾಪೋಹಗಳು ಹರಿದಾಡುತ್ತಿದ್ದರೂ, ಅಧಿಕೃತ ದೃಢೀಕರಣ ಇನ್ನೂ ಬಾಕಿಯಿದೆ.

ಅಪರಾಧ ರಾಷ್ಟ್ರೀಯ