ಏಷ್ಯಾ ಕಪ್ – ಭಾರತದ ಎದುರು ಬಾಗಿದ ಬಾಂಗ್ಲಾ: ಫೈನಲ್ ಪ್ರವೇಶಿಸಿದ ಬ್ಲೂ ಬಾಯ್ಸ್

ಏಷ್ಯಾ ಕಪ್ – ಭಾರತದ ಎದುರು ಬಾಗಿದ ಬಾಂಗ್ಲಾ: ಫೈನಲ್ ಪ್ರವೇಶಿಸಿದ ಬ್ಲೂ ಬಾಯ್ಸ್

ದುಬೈ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆದ ಏಷ್ಯಾ ಕಪ್ ಸೂಪರ್ ಫೋರ್ಸ್ ಹಂತದ 16ನೇ ಪಂದ್ಯದಲ್ಲಿ ಭಾರತವು ಬಾಂಗ್ಲಾದೇಶವನ್ನು 41 ರನ್‌ಗಳಿಂದ ಮಣಿಸಿ ಫೈನಲ್ ಪ್ರವೇಶಿಸಿದೆ. ಈ ಗೆಲುವಿನಿಂದ ಶ್ರೀಲಂಕಾ ಟೂರ್ನಿಯಿಂದ ಹೊರಬಿದ್ದಿದೆ.

ಟಾಸ್ ಸೋತ ಭಾರತ ಮೊದಲು ಬ್ಯಾಟಿಂಗ್ ಮಾಡಿ 20 ಓವರ್‌ಗಳಲ್ಲಿ 6 ವಿಕೆಟ್ ನಷ್ಟಕ್ಕೆ 168 ರನ್ ಗಳಿಸಿತು. ಅಭಿಷೇಕ್ ಶರ್ಮಾ (75; 5 ಸಿಕ್ಸ್, 8 ಫೋರ್) ಮಿಂಚಿದರೆ, ಹಾರ್ದಿಕ್ ಪಾಂಡ್ಯ 38 ರನ್ ಕೊಡುಗೆ ನೀಡಿದರು. ಬಾಂಗ್ಲಾದೇಶದ ಬೌಲರ್‌ಗಳಲ್ಲಿ ರಿಷಾದ್ ಹೋಸೈನ್ 2/27 ಪಡೆದು ಮೆಚ್ಚುಗೆ ಪಡೆದರು.

169 ರನ್ ಗುರಿಯನ್ನು ಬೆನ್ನಟ್ಟಿದ ಬಾಂಗ್ಲಾದೇಶ 19.3 ಓವರ್‌ಗಳಲ್ಲಿ 127 ರನ್‌ಗೆ ಆಲೌಟ್ ಆಯಿತು. ಸೈಫ್ ಹಸನ್ (69; 5 ಸಿಕ್ಸ್) ಒಬ್ಬನೇ ಹೋರಾಟ ಮುಂದುವರೆಸಿದರೆ, ಉಳಿದ ಬ್ಯಾಟ್ಸ್‌ಮನ್‌ಗಳು ಭಾರತೀಯ ಬೌಲಿಂಗ್ ಎದುರು ಬಗ್ಗಿದರು. ಕುಲದೀಪ್ ಯಾದವ್ (3/18), ಬೂಮ್ರಾ (2/18) ಮತ್ತು ವರುಣ್ ಚಕ್ರವರ್ತಿ (2/29) ಬಾಂಗ್ಲಾದೇಶದ ಬ್ಯಾಟಿಂಗ್ ಗೆ ಕಡಿವಾಣ ಹಾಕಿದರು.

ಮ್ಯಾನ್ ಆಫ್ ದ ಮ್ಯಾಚ್ ಆಗಿ ಅಭಿಷೇಕ್ ಶರ್ಮಾ ಆಯ್ಕೆಯಾದರು. ಭಾರತ ಫೈನಲ್‌ನಲ್ಲಿ ಬಾಂಗ್ಲಾದೇಶ–ಪಾಕಿಸ್ತಾನ ಪಂದ್ಯದ ವಿಜೇತರನ್ನು ಎದುರಿಸಲಿದ್ದು, ಶುಕ್ರವಾರದ ಭಾರತ–ಶ್ರೀಲಂಕಾ ಪಂದ್ಯವು ಈಗ ಅರ್ಥಹೀನವಾಗಿದೆ.

ಕ್ರೀಡೆ