ಐಸಿಸಿ ಇಂದ ಯುಎಸ್ಎ ಗೆ ಶಾಕ್: ಅಮೆರಿಕಾ ಕ್ರಿಕೆಟ್‌ ಅಮಾನತು

ಐಸಿಸಿ ಇಂದ ಯುಎಸ್ಎ ಗೆ ಶಾಕ್: ಅಮೆರಿಕಾ ಕ್ರಿಕೆಟ್‌ ಅಮಾನತು

ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ (ICC) ಅಮೆರಿಕಾ ಕ್ರಿಕೆಟ್‌ಗೆ ತನ್ನ ಸದಸ್ಯತ್ವ ಸ್ಥಾನವನ್ನು ಅಮಾನತುಗೊಳಿಸಿದೆ. ಅಮೆರಿಕಾ ಕ್ರಿಕೆಟ್ ಸಂಘವು ತನ್ನ ಸಂವಿಧಾನದಲ್ಲಿ ಉಲ್ಲೇಖಿಸಿರುವ ಸದಸ್ಯತ್ವದ ಬಾಧ್ಯತೆಗಳನ್ನು ನಿರಂತರವಾಗಿ ಉಲ್ಲಂಘಿಸಿರುವ ಹಿನ್ನೆಲೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ.

ಐಸಿಸಿ ಪ್ರಕಟಣೆಯ ಪ್ರಕಾರ, ಅಮೆರಿಕಾ ಕ್ರಿಕೆಟ್ ನಿರ್ವಹಣಾ ವ್ಯವಸ್ಥೆಯನ್ನು ಸಮರ್ಪಕವಾಗಿ ಜಾರಿಗೊಳಿಸಲು ವಿಫಲವಾಗಿದೆ. ಜೊತೆಗೆ, ಯುನೈಟೆಡ್ ಸ್ಟೇಟ್ಸ್ ಒಲಿಂಪಿಕ್ ಹಾಗೂ ಪ್ಯಾರಾಲಿಂಪಿಕ್ ಸಮಿತಿಯಿಂದ ರಾಷ್ಟ್ರೀಯ ನಿಯಂತ್ರಣ ಸಂಸ್ಥೆ (National Governing Body) ಸ್ಥಾನಮಾನ ಪಡೆಯುವ ಪ್ರಕ್ರಿಯೆಯಲ್ಲಿಯೂ ಯಾವುದೇ ಪ್ರಗತಿ ಸಾಧಿಸಿಲ್ಲ.

ಐಸಿಸಿ ಹೇಳಿಕೆಯಲ್ಲಿ, “ಅಮೆರಿಕಾ ಕ್ರಿಕೆಟ್ ಸದಸ್ಯತ್ವ ಅಮಾನತು ಮಾಡುವುದು ದುಃಖದ ಸಂಗತಿ, ಆದರೆ ಆಟದ ದೀರ್ಘಕಾಲೀನ ಹಿತಾಸಕ್ತಿಗಳನ್ನು ಕಾಪಾಡುವ ದೃಷ್ಟಿಯಿಂದ ಇದು ಅನಿವಾರ್ಯ ಕ್ರಮ” ಎಂದು ಸ್ಪಷ್ಟಪಡಿಸಲಾಗಿದೆ.

ಅಂತರಾಷ್ಟ್ರೀಯ ಕ್ರೀಡೆ