ನವದೆಹಲಿ: ಕೇಂದ್ರ ಮಾಧ್ಯಮಿಕ ಶಿಕ್ಷಣ ಮಂಡಳಿ (CBSE) 2026ರ ಹತ್ತನೇ (X) ಹಾಗೂ ಹನ್ನೆರಡನೇ (XII) ತರಗತಿ ಬೋರ್ಡ್ ಪರೀಕ್ಷೆಗಳ ತಾತ್ಕಾಲಿಕ ದಿನಾಂಕ ಪಟ್ಟಿಯನ್ನು ಪ್ರಕಟಿಸಿದೆ. ಫೆಬ್ರವರಿ 17, 2026ರಿಂದ ಜುಲೈ 15, 2026ರವರೆಗೆ ವಿವಿಧ ಪರೀಕ್ಷೆಗಳು ನಡೆಯಲಿವೆ ಎಂದು ಮಂಡಳಿ ತಿಳಿಸಿದೆ.

2026ರಲ್ಲಿ ಸುಮಾರು 45 ಲಕ್ಷ ವಿದ್ಯಾರ್ಥಿಗಳು ಭಾರತ ಹಾಗೂ 26 ವಿದೇಶಿ ದೇಶಗಳಿಂದ ಒಟ್ಟೂ 204 ವಿಷಯಗಳಲ್ಲಿ ಪರೀಕ್ಷೆಗೆ ಹಾಜರಾಗುವ ನಿರೀಕ್ಷೆ ಇದೆ. ಮುಖ್ಯ ಪರೀಕ್ಷೆಗಳ ಜೊತೆಗೆ ಪ್ರಾಯೋಗಿಕ, ಮೌಲ್ಯಮಾಪನ ಮತ್ತು ಫಲಿತಾಂಶ ಸಂಬಂಧಿತ ಚಟುವಟಿಕೆಗಳನ್ನು ಸಮಯೋಚಿತವಾಗಿ ಮುಗಿಸಲು ಸಿಬಿಎಸ್‌ಇ ಕ್ರಮಗಳನ್ನು ಕೈಗೊಳ್ಳಲಿದೆ.
🔸ತಾತ್ಕಾಲಿಕ ದಿನಾಂಕ ಪಟ್ಟಿಯ ಪ್ರಯೋಜನಗಳು –
▪️ವಿದ್ಯಾರ್ಥಿಗಳಿಗೆ ಸರಿಯಾದ ಅಧ್ಯಯನ ಯೋಜನೆ ರೂಪಿಸಲು ಅನುಕೂಲ.
▪️ಶಾಲೆಗಳು ತಮ್ಮ ಅಕಾಡೆಮಿಕ್ ಹಾಗೂ ಆಡಳಿತಾತ್ಮಕ ಚಟುವಟಿಕೆಗಳನ್ನು ಸಮನ್ವಯಗೊಳಿಸಲು ಸೌಲಭ್ಯ.
▪️ಶಿಕ್ಷಕರು ತಮ್ಮ ವೈಯಕ್ತಿಕ ಕಾರ್ಯಕ್ರಮಗಳು ಮತ್ತು ರಜೆಗಳನ್ನು ಸುಗಮವಾಗಿ ಯೋಜಿಸಿಕೊಳ್ಳಲು ಅವಕಾಶ.
ಸಿಬಿಎಸ್‌ಇ ಈ ತಾತ್ಕಾಲಿಕ ದಿನಾಂಕ ಪಟ್ಟಿ ಪ್ರಕಟಿಸಿರುವುದರಿಂದ ವಿದ್ಯಾರ್ಥಿಗಳು ಹಾಗೂ ಶಾಲೆಗಳು ಮುಂಚಿತ ಸಿದ್ಧತೆ ನಡೆಸಲು ನೆರವಾಗಲಿದೆ.

