ಕಾಂತಾರ ಖ್ಯಾತಿಗೆ ಹೊಸ ಅಂಚೆ ಗೌರವ: ಭೂತಕೋಲಾ ಸಂಸ್ಕೃತಿಯ ಸ್ಮರಣಾರ್ಥ ವಿಶೇಷ ಅಂಚೆ ಕವರ್ ಬಿಡುಗಡೆ

ಕಾಂತಾರ ಖ್ಯಾತಿಗೆ ಹೊಸ ಅಂಚೆ ಗೌರವ: ಭೂತಕೋಲಾ ಸಂಸ್ಕೃತಿಯ ಸ್ಮರಣಾರ್ಥ ವಿಶೇಷ ಅಂಚೆ ಕವರ್ ಬಿಡುಗಡೆ

ಬೆಂಗಳೂರು: ತುಳುನಾಡ ಸಾಂಪ್ರದಾಯಿಕ ಭೂತಕೋಲ ಸಂಸ್ಕೃತಿಗೆ ಗೌರವ ಸಲ್ಲಿಸುವ ನಿಟ್ಟಿನಲ್ಲಿ, ಭಾರತೀಯ ಅಂಚೆ ಇಲಾಖೆ ಮತ್ತು ಹೊಂಬಾಳೆ ಫಿಲ್ಮ್ಸ್ ವಿಶೇಷ ಅಂಚೆ ಕವರ್ ಹಾಗೂ ಎರಡು ಚಿತ್ರಪತ್ರಗಳನ್ನು ಬಿಡುಗಡೆ ಮಾಡಿವೆ. ಭೂತಕೋಲಾ, ಭಕ್ತಿ, ಜನಪದಕತೆ ಮತ್ತು ಪರಂಪರೆಗಳನ್ನು ಒಂದಾಗಿ ಕಟ್ಟಿರುವ ಸಂಪ್ರದಾಯ, ಕಾಂತಾರ ಚಲನಚಿತ್ರದ ಮೂಲಕ ಇತ್ತೀಚೆಗೆ ಜಾಗತಿಕ ಮಟ್ಟದಲ್ಲಿ ಗಮನ ಸೆಳೆದಿದೆ.

ಕರ್ನಾಟಕ ಅಂಚೆ ವಲಯದ ಸಹಯೋಗದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ, ಭೂತಕೋಲಾದ ಜೀವಂತ ಬಣ್ಣಗಳು ಮತ್ತು ಅದರ ಪರಂಪರೆಯ ಕಥಾನಕವನ್ನು ಅಂಚೆ ಸಂಗ್ರಹಣೆಯ ರೂಪದಲ್ಲಿ ತೋರಿಸಲಾಗಿದೆ. ಈ ವಿಶೇಷ ಕವರ್ ಮತ್ತು ಚಿತ್ರಪತ್ರಗಳು ರಿಷಭ್ ಶೆಟ್ಟಿ ಅವರ ಸಮ್ಮುಖದಲ್ಲಿ ಅನಾವರಣಗೊಂಡಿವೆ.

ಭಾರತೀಯ ಅಂಚೆ ಇಲಾಖೆ ಈ ವಿಶೇಷ ಬಿಡುಗಡೆ ಮೂಲಕ ಕರ್ನಾಟಕದ ಸಾಂಸ್ಕೃತಿಕ ಪರಂಪರೆಯನ್ನು ಪ್ರೋತ್ಸಾಹಿಸುವುದು ಮತ್ತು ಹೋಂಬಾಳೆ ಫಿಲ್ಮ್ಸ್ ಜೊತೆ ಕೈಗೂಡಿ, ಸ್ಥಳೀಯ ಕಥೆಗಳೊಂದಿಗೆ ಜಾಗತಿಕ ಪ್ರೇಕ್ಷಕರಿಗೆ ಕೊಂಡಿ ಹಾಕುತ್ತಿದೆ.

ಮನೋರಂಜನೆ ರಾಷ್ಟ್ರೀಯ