ಪೋಷಕರಾಗಲಿರುವ ಬಾಲಿವುಡ್ ಜೋಡಿ: ಸೋಶಿಯಲ್ ಮೀಡಿಯಾದಲ್ಲಿ ಮಾಹಿತಿ ಹಂಚಿಕೊಂಡ ಜೋಡಿ

ಪೋಷಕರಾಗಲಿರುವ ಬಾಲಿವುಡ್ ಜೋಡಿ: ಸೋಶಿಯಲ್ ಮೀಡಿಯಾದಲ್ಲಿ ಮಾಹಿತಿ ಹಂಚಿಕೊಂಡ ಜೋಡಿ

ಬಾಲಿವುಡ್ ಜೋಡಿ ಕತ್ರಿನಾ ಕೈಫ್ ಮತ್ತು ವಿಕ್ಕಿ ಕೌಶಲ್ ಇದೀಗ ಪೋಷಕರಾಗಲು ಸಜ್ಜಾಗಿದ್ದಾರೆ. ತಮ್ಮ ಮೊದಲ ಸಂತಾನ ಆಗಮನದ ಸಂತೋಷವನ್ನು ಇನ್‌ಸ್ಟಾಗ್ರಾಂ ಮೂಲಕ ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದಾರೆ.

ಕತ್ರಿನಾ ಗರ್ಭಿಣಿಯಾಗಿರುವ ಸುದ್ದಿ ಹಲವು ತಿಂಗಳುಗಳಿಂದ ಊಹಾಪೋಹಗಳ ಕೇಂದ್ರವಾಗಿತ್ತು. ಇದೀಗ ದಂಪತಿ ಅಧಿಕೃತವಾಗಿ ಘೋಷಣೆ ಮಾಡಿ ಎಲ್ಲಾ ವದಂತಿಗಳಿಗೆ ತೆರೆ ಎಳೆದಿದ್ದಾರೆ.

ಅವರು ಹೃದಯಸ್ಪರ್ಶಿ ಸಂದೇಶವೊಂದನ್ನು ಹಂಚಿಕೊಂಡಿದ್ದು ಹೀಗಿದೆ:
“ನಮ್ಮ ಜೀವನದ ಅತ್ಯಂತ ಸುಂದರ ಅಧ್ಯಾಯವನ್ನು ಆರಂಭಿಸಲು ನಾವು ಹೆಜ್ಜೆ ಇಡುತ್ತಿದ್ದೇವೆ. ನಮ್ಮ ಹೃದಯಗಳು ಸಂತೋಷ ಮತ್ತು ಕೃತಜ್ಞತೆಯಿಂದ ತುಂಬಿವೆ.”

2021ರಲ್ಲಿ ವಿವಾಹವಾದ ಈ ಜೋಡಿ, ಹಲವು ವರ್ಷಗಳ ಸ್ನೇಹ ಮತ್ತು ಪ್ರೀತಿಯ ನಂತರ ಇದೀಗ ಹೊಸ ಹಂತಕ್ಕೆ ಕಾಲಿಟ್ಟಿದೆ. ವರದಿಗಳ ಪ್ರಕಾರ, ಕತ್ರಿನಾ ಕೈಫ್ ಜೋಡಿ ಈ ವರ್ಷದ ಕೊನೆಯಲ್ಲಿ ಮಗುವಿನ ಆಗಮನದ ನಿರೀಕ್ಷೆಯಲ್ಲಿ ಇದ್ದಾರೆ ಎಂದು ತಿಳಿದುಬಂದಿದೆ.

ಮನೋರಂಜನೆ ರಾಷ್ಟ್ರೀಯ