ಇತ್ತೀಚೆಗೆ ಹಲವಾರು ಮೊಬೈಲ್ ಬಳಕೆದಾರರಿಗೆ “ನಿಮ್ಮ ಇಂಡಿಯಾ ಪೋಸ್ಟ್ ಪಾರ್ಸೆಲ್ ವಿಳಾಸ ಅಪೂರ್ಣವಾಗಿರುವುದರಿಂದ ತಲುಪಿಸಲಾಗಲಿಲ್ಲ. ದಯವಿಟ್ಟು ವಿಳಾಸವನ್ನು ನವೀಕರಿಸಿ ಹಾಗೂ ಸೇವಾ ಶುಲ್ಕ ಪಾವತಿಸಿ ಮರು ತಲುಪಿಸಿಕೊಳ್ಳಿ” ಎಂಬ ಸಂದೇಶ ಬರುತ್ತಿರುವ ಬಗ್ಗೆ ಜನರಲ್ಲಿ ಆತಂಕ ಉಂಟಾಗಿದೆ.

ಈ ಕುರಿತು PIB ಫ್ಯಾಕ್ಟ್ ಚೆಕ್ ಸ್ಪಷ್ಟನೆ ನೀಡಿದ್ದು, ಈ ಸಂದೇಶ ಸಂಪೂರ್ಣ ನಕಲಿ (Fake) ಎಂದು ತಿಳಿಸಿದೆ.
ಇಂಡಿಯಾ ಪೋಸ್ಟ್ ಕಚೇರಿ ಎಂದಿಗೂ ಎಸ್ಎಮ್ಎಸ್ ಮೂಲಕ ವಿಳಾಸ ನವೀಕರಣ ಅಥವಾ ಪಾವತಿ ಕೇಳುವುದಿಲ್ಲ.
ಇಂತಹ ಸಂಶಯಾಸ್ಪದ ಲಿಂಕ್‌ಗಳನ್ನು ಕ್ಲಿಕ್ ಮಾಡುವುದರಿಂದ ವೈಯಕ್ತಿಕ ಮಾಹಿತಿಗಳು ಹಾಗೂ ಹಣ ಕಳೆದುಕೊಳ್ಳುವ ಅಪಾಯವಿದೆ.
ಅಧಿಕಾರಿಗಳು ನಾಗರಿಕರಿಗೆ ಎಚ್ಚರಿಕೆ ನೀಡಿದ್ದು, “ಯಾರಿಗೂ ವೈಯಕ್ತಿಕ ಮಾಹಿತಿಯನ್ನು ಹಂಚಿಕೊಳ್ಳಬೇಡಿ, ಶಂಕಾಸ್ಪದ ಲಿಂಕ್‌ಗಳಿಗೆ ಕ್ಲಿಕ್ ಮಾಡಬೇಡಿ” ಎಂದು ಮನವಿ ಮಾಡಿದ್ದಾರೆ.

