ಪ್ರೀತಿ ಗುಟ್ಟನ್ನು ಹಂಚಿಕೊಂಡ ಸ ರಿ ಗ ಮ ಪ ಖ್ಯಾತಿಯ ಸುಹಾನಾ ಸೈಯದ್ : ಯಾರು ಆ ಹುಡುಗ?

ಪ್ರೀತಿ ಗುಟ್ಟನ್ನು ಹಂಚಿಕೊಂಡ ಸ ರಿ ಗ ಮ ಪ ಖ್ಯಾತಿಯ ಸುಹಾನಾ ಸೈಯದ್ : ಯಾರು ಆ ಹುಡುಗ?

ಸರಿಗಮಪ’ ವೇದಿಕೆಯಿಂದ ಗುರುತಿಸಿಕೊಂಡ ಗಾಯಕಿ ಸುಹಾನಾ ಸೈಯದ್, ಈಗ ತಮ್ಮ ಪ್ರೀತಿ ಜೀವನವನ್ನು ಬಹಿರಂಗಪಡಿಸಿದ್ದಾರೆ. ಅವರು ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಈ ಗುಟ್ಟನ್ನು ಬಹಿರಂಗ ಗೊಳಿಸಿದ್ದಾರೆ.

ಯಾರು ಆ ಹುಡುಗ?

ರಂಗಭೂಮಿ ಕಲಾವಿದನಾಗಿರುವ ನಿತಿನ್ ಶಿವಾಂಶ್ ಅವರೊಂದಿಗೆ ತಮ್ಮ ಮುಂದಿನ ಜೀವನವನ್ನು ಕಳೆಯಲು ನಿರ್ಧರಿಸಿದ್ದನ್ನು ಹಂಚಿಕೊಂಡಿದ್ದಾರೆ.
ನಿತಿನ್ ನೀನಾಸಂನಲ್ಲಿ ತರಬೇತಿ ಪಡೆದಿರುವ ರಂಗಭೂಮಿ ಕಲಾವಿದ.

ಇನ್ನು ಸುಹಾನ ಸೋಶಿಯಲ್ ಮೀಡಿಯಾದಲ್ಲಿ ತಮ್ಮ ಪ್ರೀತಿ ವಿಷಯವನ್ನು ಈ ರೀತಿ ಹಂಚಿಕೊಂಡಿದ್ದಾರೆ –

ಪ್ರತಿ ಜೀವಿಯ ಅನ್ವೇಷಣೆ ಪ್ರೇಮಕ್ಕಾಗಿಯೇ
ಪ್ರತಿ ಜೀವಿಯ ನಿರೀಕ್ಷೆ ಪ್ರೇಮಕ್ಕಾಗಿಯೇ,
ಪ್ರೇಮಕ್ಕೆ ಕಾರಣ ಇಲ್ಲ.
ಈ ಪ್ರೇಮ ಅನಂತ ದೂರದ ಸುಧೀರ್ಘ ಪ್ರಯಾಣ……..

ಪ್ರೇಮಕ್ಕೆ ಯಾವ ಮಿತಿ ಇಲ್ಲ, ಎಂಬುದಕ್ಕೆ ನಾವೇ ಸಾಕ್ಷಿ.

ಹೃದಯಗಳ ಭಾಷೆ ಎಲ್ಲವನ್ನೂ ಮೀರಿದ್ದು..

ಪ್ರತಿ ಸವಾಲು, ಪ್ರತಿ ಸಂಶಯ ಮತ್ತು ಪ್ರತಿ ಭಯದ ಮೌನದಲ್ಲಿಯೂ ನಮ್ಮನ್ನು ಹಿಡಿದಿಟ್ಟಿದ್ದು ಪ್ರೀತಿ..

ಇಂದು, ನಮ್ಮ ಗುಟ್ಟನ್ನು ನಿಮ್ಮೊಂದಿಗೆ ಹಂಚಿಕೊಳ್ಳುತ್ತಿದ್ದೇವೆ..
ನಿಮ್ಮ ಆಶೀರ್ವಾದವಿರಲಿ !”

ಮನೋರಂಜನೆ ರಾಜ್ಯ