ಮೈಸೂರು ದಸರಾ 2025 ಉದ್ಘಾಟನೆ: ಮೈಸೂರು ಮಲ್ಲಿಗೆ, ಕೇಸರಿ ಸೀರೆ ಉಟ್ಟು ಆಗಮಿಸಿದ ಬಾನು ಮುಷ್ತಾಕ್

ಮೈಸೂರು ದಸರಾ 2025 ಉದ್ಘಾಟನೆ: ಮೈಸೂರು ಮಲ್ಲಿಗೆ, ಕೇಸರಿ ಸೀರೆ ಉಟ್ಟು ಆಗಮಿಸಿದ ಬಾನು ಮುಷ್ತಾಕ್

ಮೈಸೂರು: ವಿಶ್ವವಿಖ್ಯಾತ ಮೈಸೂರು ದಸರಾ ಹಬ್ಬಕ್ಕೆ ಇಂದು ಚಾಲನೆ ದೊರೆತಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ, ಬುಕ್ಕರ್ ಪ್ರಶಸ್ತಿ ವಿಜೇತೆ ಬಾನು ಮುಷ್ತಾಕ್ ಸೇರಿದಂತೆ ಅನೇಕ ಗಣ್ಯರು ಇಂದು ಮೈಸೂರು ದಸರಾ 2025 ಉದ್ಘಾಟನೆ ಕಾರ್ಯಕ್ರಮದಲ್ಲಿ ಭಾಗವಹಿಸಿ, ರಜತ ಮಂಟಪದಲ್ಲಿ ವಿರಾಜಮಾನಳಾದ ಚಾಮುಂಡೇಶ್ವರಿ ದೇವಿಗೆ ಪುಷ್ಪಾರ್ಚನೆ ಮಾಡಿದರು.

ಇನ್ನು ಬಾನು ಮುಷ್ತಾಕ್ ಅವರು ದಸರಾ ಉದ್ಘಾಟನೆಗೆ ಮೈಸೂರು ಮಲ್ಲಿಗೆ ಮುಡಿದು, ಕೇಸರಿ ಸೀರೆ ಉಟ್ಟು ಆಗಮಿಸಿದ್ದರು.

ಪ್ರಾರಂಭದಲ್ಲಿ ಬಾನು ಮುಷ್ತಾಕ್ ಅವರನ್ನು ಆಹ್ವಾನಿಸುವ ವಿಷಯದಲ್ಲಿ ವ್ಯಾಪಕ ವಿರೋಧ ವ್ಯಕ್ತವಾಗಿತ್ತು. ಆದರೆ, ಕರ್ನಾಟಕ ಹೈಕೋರ್ಟ್ ಹಾಗೂ ಸುಪ್ರೀಂ ಕೋರ್ಟ್ ಅನುಮತಿಸಿದ ಹಿನ್ನೆಲೆಯಲ್ಲಿ ಅವರು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಾರೆ.

ಸೆಪ್ಟೆಂಬರ್ 19ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸುಪ್ರೀಂ ಕೋರ್ಟ್ ನಿರ್ಧಾರವನ್ನು ಸ್ವಾಗತಿಸಿ, “ಮೈಸೂರು ದಸರಾ ಧಾರ್ಮಿಕ ಚೌಕಟಕ್ಕೆ ಸೀಮಿತವಾಗಿರಲು ಸಾಧ್ಯವಿಲ್ಲ. ಈ ಹಬ್ಬವು ರಾಜ್ಯದ ಎಲ್ಲಾ ಜನರಿಗೆ, ಜಾತಿ-ಧರ್ಮ ಮೀರಿದ ಹಬ್ಬ” ಎಂದು ಟ್ವೀಟ್ ಮಾಡಿದ್ದಾರೆ.

ಮೈಸೂರು ದಸರಾ ಹಬ್ಬವು ನವರಾತ್ರಿ ಮೊದಲ ದಿನದಿಂದ ಆರಂಭವಾಗಿ ವಿಜಯದಶಮಿಯಂದು ಅಂತ್ಯಗೊಳ್ಳುವ 10 ದಿನಗಳ ಹಬ್ಬವಾಗಿದೆ. ಹಬ್ಬದ ಪ್ರಮುಖ ಆಕರ್ಷಣೆ ಮೈಸೂರು ಅರಮನೆ, ಅಥವಾ ಅಂಬ ವಿಲಾಸ ಅರಮನೆ ಆಗಿದ್ದು, ಸಾವಿರಾರು ದೀಪಗಳಿಂದ ಅಲಂಕೃತವಾಗುತ್ತದೆ.

ಧಾರ್ಮಿಕ ರಾಜ್ಯ