ಏಷ್ಯಾ ಕಪ್ 2025: ಫರಾನ್ ಗನ್ ಫೈರಿಂಗ್’ ಸಂಭ್ರಮಕ್ಕೆ ವ್ಯಾಪಕ ಟೀಕೆ

ಏಷ್ಯಾ ಕಪ್ 2025: ಫರಾನ್ ಗನ್ ಫೈರಿಂಗ್’ ಸಂಭ್ರಮಕ್ಕೆ ವ್ಯಾಪಕ ಟೀಕೆ

ದುಬೈ: ಏಷ್ಯಾ ಕಪ್ 2025 ಸೂಪರ್-4 ಹಂತದ ನಿನ್ನೆ ನಡೆದ ಪಂದ್ಯದಲ್ಲಿ ಭಾರತದ ವಿರುದ್ಧ ಪಾಕ್ ನ ಬ್ಯಾಟರ್ ಸಾಹಿಬ್‌ಜಾದ ಫರಾನ್ ಸಂಭ್ರಮ ವಿವಾದಕ್ಕೆ ಕಾರಣವಾಗಿದೆ.

ಫರಾನ್ 34 ಎಸೆತಗಳಲ್ಲಿ ಅರ್ಧಶತಕ ಬಾರಿಸಿದರು. ಇದಕ್ಕೆ ಅಭಿಷೇಕ್ ಶರ್ಮಾ ಕೈಬಿಟ್ಟ ಎರಡು ಕ್ಯಾಚ್‌ಗಳ ಸಹಾಯವೂ ಸಿಕ್ಕಿತ್ತು. ಆದರೆ ತಮ್ಮ ಹಾಫ್ ಸೆಂಚುರಿ ಪೂರೈಸಿದ ತಕ್ಷಣ, ಫರಾನ್ “ಗನ್ ಫೈರಿಂಗ್” ಶೈಲಿಯ ಸಂಭ್ರಮ ತೋರಿದರು. ಈ ಘಟನೆ ತಕ್ಷಣವೇ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಯಿತು.

ಭಾರತೀಯ ಅಭಿಮಾನಿಗಳು ಹಾಗೂ ಕ್ರಿಕೆಟ್ ಪ್ರೇಮಿಗಳು ಇದನ್ನು ತೀವ್ರವಾಗಿ ಖಂಡಿಸಿದ್ದಾರೆ. ಏಕೆಂದರೆ ಏಪ್ರಿಲ್ 22ರಂದು ಜಮ್ಮು ಕಾಶ್ಮೀರದ ಪಹಲ್ಗಾಮ್‌ನಲ್ಲಿ ಪಾಕಿಸ್ತಾನ ಮೂಲದ ಉಗ್ರರ ದಾಳಿಯಲ್ಲಿ ಭಾರತೀಯ ಪ್ರವಾಸಿಗರು ಪ್ರಾಣ ಕಳೆದುಕೊಂಡಿದ್ದರು. ಈ ಹಿನ್ನೆಲೆ, ಗನ್ ಫೈರಿಂಗ್ ಶೈಲಿಯ ಸಂಭ್ರಮವನ್ನು ಅಸಂವೇದನಶೀಲ ಎಂದು ಕರೆಯಲಾಗಿದೆ.

ಇದೇ ವೇಳೆ, ಫರಾನ್‌ನ ಈ ನಡೆ ಐಸಿಸಿ ಶಿಸ್ತು ಸಂಹಿತೆ ಉಲ್ಲಂಘನೆಯಲ್ಲವೇ ಎಂಬ ಪ್ರಶ್ನೆಯೂ ತಲೆದೋರಿದೆ.

ಅಂತರಾಷ್ಟ್ರೀಯ ಅಪರಾಧ ಕ್ರೀಡೆ