ವಡೋದರದಲ್ಲಿ ವಿಚಿತ್ರ ಘಟನೆ – ಪಾನಿಪುರಿ ವಿವಾದದಿಂದ ರಸ್ತೆಯ ಮಧ್ಯೆ ಕುಳಿತ ಮಹಿಳೆ

ವಡೋದರದಲ್ಲಿ ವಿಚಿತ್ರ ಘಟನೆ – ಪಾನಿಪುರಿ ವಿವಾದದಿಂದ ರಸ್ತೆಯ ಮಧ್ಯೆ ಕುಳಿತ ಮಹಿಳೆ

ವಡೋದರ ನಗರದಲ್ಲಿ ವಿಚಿತ್ರ ಘಟನೆ ನಡೆದಿದೆ. ಪಾನಿಪುರಿ ಖರೀದಿಸಿದ ಮಹಿಳೆಗೆ ಎರಡು ಪುರಿಗಳು ಕಡಿಮೆ ಸಿಕ್ಕಿದ ಕಾರಣ ಆಕ್ರೋಶಗೊಂಡ ಅವರು ತಕ್ಷಣವೇ ಗದ್ದಲ ಸೃಷ್ಟಿಸಿದರು. ಕೋಪದಿಂದಾಗಿ ಅವರು ವಾಹನ ಸಂಚಾರ ತುಂಬಾ ಜಾಸ್ತಿಯಾಗಿದ್ದ ರಸ್ತೆಯ ಮಧ್ಯದಲ್ಲೇ ಕುಳಿತು ಪ್ರತಿಭಟನೆ ನಡೆಸಿದರು.

ಈ ಘಟನೆ ಕೆಲವೇ ಕ್ಷಣಗಳಲ್ಲಿ ಅಲ್ಲಿ ಹಾದುಹೋಗುತ್ತಿದ್ದ ಜನರು ಹಾಗೂ ವಾಹನ ಸವಾರರ ಗಮನ ಸೆಳೆಯಿತು. ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿ ಹಲವರ ಕುತೂಹಲ ಕೆರಳಿಸಿದೆ.

ಸಣ್ಣ ವಿಷಯಕ್ಕೆ ಇಷ್ಟು ದೊಡ್ಡ ಗದ್ದಲ ಮಾಡಿದ ಮಹಿಳೆಯ ವರ್ತನೆಗೆ ಕೆಲವರು ಟೀಕಿಸಿದರೆ, ಕೆಲವರು ಹಾಸ್ಯಮಾಡಿ “ಪಾನಿಪುರಿ ಪ್ರೇಮ ಅಷ್ಟರ ಮಟ್ಟಿಗೆ ಹೋಗಿದೆ” ಎಂದು ಕಾಮೆಂಟ್ ಮಾಡಿದ್ದಾರೆ.

ಅಪರಾಧ ರಾಷ್ಟ್ರೀಯ