ಯುಪಿಐ ಆ್ಯಪ್‌ಗಳಲ್ಲಿ ಕ್ರೆಡಿಟ್ ಕಾರ್ಡ್ ಮೂಲಕ ರೆಂಟ್ ಪಾವತಿ ನಿಷೇಧ – ಆರ್‌ಬಿಐ ಹೊಸ ನಿಯಮ ಜಾರಿಗೆ

ಯುಪಿಐ ಆ್ಯಪ್‌ಗಳಲ್ಲಿ ಕ್ರೆಡಿಟ್ ಕಾರ್ಡ್ ಮೂಲಕ ರೆಂಟ್ ಪಾವತಿ ನಿಷೇಧ – ಆರ್‌ಬಿಐ ಹೊಸ ನಿಯಮ ಜಾರಿಗೆ

ನವದೆಹಲಿ (ಸೆ.19): ಬಾಡಿಗೆ ಪಾವತಿಯಲ್ಲಿ ಕ್ರೆಡಿಟ್ ಕಾರ್ಡ್ ಬಳಕೆ ಮೇಲೆ ಆರ್‌ಬಿಐ ಹೊಸ ನಿಯಮ ಜಾರಿಗೊಳಿಸಿದೆ. ಸೆಪ್ಟೆಂಬರ್ 15ರಿಂದ ಜಾರಿಯಾದ ಪರಿಷ್ಕೃತ ಮಾರ್ಗಸೂಚಿಯ ಪ್ರಕಾರ, ಕ್ರೆಡಿಟ್ ಕಾರ್ಡ್ ಮೂಲಕ ಯುಪಿಐ ಆ್ಯಪ್‌ಗಳಲ್ಲಿ ನೇರವಾಗಿ ಮನೆಮಾಲೀಕರಿಗೆ ಬಾಡಿಗೆ ಪಾವತಿ ಮಾಡುವ ಅವಕಾಶ ಇಲ್ಲದಂತಾಗಿದೆ. ವೆರಿಫೈ ಆಗಿರುವ ಮತ್ತು ಒಪ್ಪಂದ ಹೊಂದಿರುವ ವರ್ತಕರಿಗೆ ಮಾತ್ರ ಈ ಸೌಲಭ್ಯ ಲಭ್ಯವಾಗಲಿದೆ ಎಂದು ಆರ್‌ಬಿಐ ತಿಳಿಸಿದೆ.

ಈ ನಿಯಮ ಬದಲಾವಣೆಗೂ ಮುನ್ನ ಕ್ರೆಡ್, ಫೋನ್‌ಪೇ, ಪೇಟಿಎಂ, ಅಮೆಜಾನ್ ಪೇ ಮುಂತಾದ ಫಿನ್‌ಟೆಕ್ ಪ್ಲಾಟ್‌ಫಾರ್ಮ್‌ಗಳಲ್ಲಿ ಕ್ರೆಡಿಟ್ ಕಾರ್ಡ್ ಬಳಸಿ ಬಾಡಿಗೆ ಪಾವತಿಸಲಾಗುತ್ತಿತ್ತು. ಇದರೊಂದಿಗೆ ಗ್ರಾಹಕರಿಗೆ ರಿವಾರ್ಡ್ ಪಾಯಿಂಟ್ಸ್ ಸಿಗುತ್ತಿದ್ದು, ಇದು ದೊಡ್ಡ ಮಟ್ಟದಲ್ಲಿ ಜನಪ್ರಿಯವಾಗಿತ್ತು. ಆದರೆ, ಕೆವೈಸಿ ಪರಿಶೀಲನೆಯ ಕೊರತೆ ಹಾಗೂ ನಿಯಂತ್ರಣದ ಅಭಾವದ ಹಿನ್ನೆಲೆಯಲ್ಲಿ ಆರ್‌ಬಿಐ ಈ ಸೇವೆಗೆ ಕಡಿವಾಣ ಹಾಕಿದೆ.

ಕಳೆದ ವರ್ಷವೇ ಕೆಲವು ಬ್ಯಾಂಕುಗಳು ಈ ಸಂಬಂಧ ಕ್ರಮ ಕೈಗೊಂಡಿದ್ದವು. ಎಚ್‌ಡಿಎಫ್‌ಸಿ ಬ್ಯಾಂಕ್‌ ಕ್ರೆಡಿಟ್ ಕಾರ್ಡ್ ಮೂಲಕ ರೆಂಟ್ ಪಾವತಿಗೆ ಶುಲ್ಕ ವಿಧಿಸಿತ್ತು, ಐಸಿಐಸಿಐ ಮತ್ತು ಎಸ್‌ಬಿಐ ಕಾರ್ಡ್ ಕಂಪನಿಗಳು ರಿವಾರ್ಡ್ ಪಾಯಿಂಟ್ಸ್ ನೀಡುವುದನ್ನು ನಿಲ್ಲಿಸಿದ್ದವು.

ಇದೀಗ, ಬಾಡಿಗೆ ಪಾವತಿಗೆ ಯುಪಿಐ ಮೂಲಕ ವ್ಯಕ್ತಿಯಿಂದ ವ್ಯಕ್ತಿಗೆ ಟ್ರಾನ್ಸ್ಫರ್, ನೆಟ್‌ಬ್ಯಾಂಕಿಂಗ್, ಕ್ಯಾಶ್ ಅಥವಾ ಚೆಕ್‌ಗಳಂತಹ ಆಯ್ಕೆಗಳು ಮಾತ್ರ ಲಭ್ಯ. ಆದರೆ, ಇವುಗಳಲ್ಲಿ ರಿವಾರ್ಡ್ ಪಾಯಿಂಟ್ಸ್ ಸಿಗುವುದಿಲ್ಲ.

ತಂತ್ರಜ್ಞಾನ ರಾಷ್ಟ್ರೀಯ