2025ರ ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‌ಷಿಪ್: ನೀರಜ್ ಚೋಪ್ರಾ ಫೈನಲ್ ಕನಸು ಭಗ್ನ

2025ರ ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‌ಷಿಪ್: ನೀರಜ್ ಚೋಪ್ರಾ ಫೈನಲ್ ಕನಸು ಭಗ್ನ

2025ರ ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‌ಷಿಪ್‌ನಲ್ಲಿ ಭಾರತದ ಜಾವೆಲಿನ್ ತಾರೆ, ಒಲಿಂಪಿಕ್ ಚಾಂಪಿಯನ್ ನೀರಜ್ ಚೋಪ್ರಾ, ನಿರೀಕ್ಷಿತ ಪ್ರದರ್ಶನ ನೀಡದೆ ಫೈನಲ್ ಹಂತದಿಂದಲೇ ಹೊರಬಿದ್ದಿದ್ದಾರೆ.

ಪುರುಷರ ಜಾವೆಲಿನ್ ಸ್ಪರ್ಧೆಯಲ್ಲಿ ನೀರಾಜ್ ಒಟ್ಟು 84.03 ಮೀಟರ್ ಎಸೆತದೊಂದಿಗೆ ಎಂಟನೇ ಸ್ಥಾನದಲ್ಲಿ ತೃಪ್ತಿಪಡಬೇಕಾಯಿತು. ಸ್ಪರ್ಧೆಯಲ್ಲಿ ಯಾರೂ 90 ಮೀಟರ್ ಗಡಿಯನ್ನು ಮೀರಿ ಎಸೆಯಲು ಸಾಧ್ಯವಾಗದ ಸಂದರ್ಭದಲ್ಲಿ, ಭಾರತದ ಯುವ ಸ್ಪರ್ಧಿ ಸಚಿನ್ ಯಾದವ್ ಅಚ್ಚರಿ ಮೂಡಿಸುವ ಪ್ರದರ್ಶನ ನೀಡಿ, ತನ್ನ ವೈಯಕ್ತಿಕ ಶ್ರೇಷ್ಠ ದಾಖಲೆಯೊಂದಿಗೆ ನಾಲ್ಕನೇ ಸ್ಥಾನವನ್ನು ಪಡೆದಿದ್ದಾರೆ.

ದೇಶದ ನಿರೀಕ್ಷೆಗಳ ನಡುವೆ ನಿರಾಶೆ ಮೂಡಿಸಿದರೂ, ನೀರಜ್ ಮುಂದಿನ ದಿನಗಳಲ್ಲಿ ಮತ್ತೆ ಬಲಿಷ್ಠವಾಗಿ ಮರಳುವ ವಿಶ್ವಾಸ ಅಭಿಮಾನಿಗಳಲ್ಲಿ ಜೀವಂತವಾಗಿದೆ.

ಕ್ರೀಡೆ