ಚಾರ್‌ಧಾಮ್ ಯಾತ್ರೆಗೆ ಹೆಲಿಕಾಪ್ಟರ್ ಸೇವೆ ಪುನರಾರಂಭಕ್ಕೆ ಡಿಜಿಸಿಎ ಅನುಮತಿ

ಚಾರ್‌ಧಾಮ್ ಯಾತ್ರೆಗೆ ಹೆಲಿಕಾಪ್ಟರ್ ಸೇವೆ ಪುನರಾರಂಭಕ್ಕೆ ಡಿಜಿಸಿಎ ಅನುಮತಿ

ಮಳೆಗಾಲದ ವಿರಾಮದ ಬಳಿಕ ಚಾರ್‌ಧಾಮ್ ಯಾತ್ರೆಯ ಹೆಲಿಕಾಪ್ಟರ್ ಸೇವೆಗೆ ವಿಮಾನಯಾನ ಮಹಾನಿರ್ದೇಶನಾಲಯ (ಡಿಜಿಸಿಎ) ಅನುಮೋದನೆ ನೀಡಿದೆ. ನಾಗರಿಕ ವಿಮಾನಯಾನ ಸಚಿವಾಲಯದ ಪ್ರಕಾರ, ಯಾತ್ರಿಕರ ಸುರಕ್ಷತೆಯನ್ನು ಹೆಚ್ಚಿಸಲು ಹೊಸ ತಂತ್ರಜ್ಞಾನ ಆಧಾರಿತ ಕ್ರಮಗಳನ್ನು ಜಾರಿಗೆ ತಂದು, ಅವುಗಳನ್ನು ಕಠಿಣ ಪರಿಶೀಲನೆಯ ಬಳಿಕ ಅನುಮತಿ ನೀಡಲಾಗಿದೆ.

ನಾಗರಿಕ ವಿಮಾನಯಾನ ಸಚಿವ ರಾಮ್ಮೋಹನ್ ನಾಯ್ಡು ಹಾಗೂ ಉತ್ತರಾಖಂಡ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಅವರು ದೆಹಲಿ ಮತ್ತು ದೇಹ್ರಾಡೂನ್‌ನಲ್ಲಿ ಹಲವು ವಿಮರ್ಶಾ ಸಭೆಗಳನ್ನು ನಡೆಸಿ, ರಾಜ್ಯ ಸರ್ಕಾರ, ವಿಮಾನ ನಿಲ್ದಾಣ ಪ್ರಾಧಿಕಾರ ಹಾಗೂ ಡಿಜಿಸಿಎ ನಡುವೆ ಸಮನ್ವಯ ಸಾಧಿಸಿದ್ದಾರೆ.

ಕೆಲ ದಿನಗಳ ಹಿಂದೆ ಡಿಜಿಸಿಎ ತಂಡವು ಎಲ್ಲಾ ಹೆಲಿಪ್ಯಾಡ್‌ಗಳು, ಹೆಲಿಕಾಪ್ಟರ್‌ಗಳು ಹಾಗೂ ಆಪರೇಟರ್‌ಗಳ ಸಿದ್ಧತೆಗಳ ಪರಿಶೀಲನೆ ನಡೆಸಿತ್ತು. ಅದರ ಬಳಿಕ ಸೇವೆಗೆ ಅನುಮೋದನೆ ನೀಡಲಾಗಿದೆ. ಯಾತ್ರೆಯ ಅವಧಿಯಲ್ಲಿ ಡಿಜಿಸಿಎ ಕಟ್ಟುನಿಟ್ಟಿನ ನಿಗಾ ವಹಿಸಿ ನಿರಂತರ ಮೇಲ್ವಿಚಾರಣೆ ನಡೆಸಲಿದೆ ಎಂದು ತಿಳಿಸಿದೆ.

ಧಾರ್ಮಿಕ ರಾಷ್ಟ್ರೀಯ