ಕಡಬ ತಾಲೂಕಿನ ಶ್ರೀರಾಮಕುಂಜೇಶ್ವರ ಪಿ.ಯು. ಕಾಲೇಜು ಮತ್ತು ಕನ್ನಡ ಮಧ್ಯಮ ಪ್ರಾಥಮಿಕ ಶಾಲೆಯಲ್ಲಿ 2025-26 ನೇ ಸಾಲಿನ ಮೈಸೂರು ವಿಭಾಗ ಮಟ್ಟದ ಕಬಡ್ಡಿ ಪಂದ್ಯಾಟ ಆಯೋಜನೆಯಾಗಿದೆ.

14ರ, 17ರ ವಯೋಮಾನದ ಬಾಲಕ ಮತ್ತು ಬಾಲಕಿಯರ ಕಬಡ್ಡಿ ಪಂದ್ಯಾಟ ಸೆಪ್ಟೆಂಬರ್ 27 ಮತ್ತು 28ರಂದು ನಡೆಯಲಿದೆ.
ಈ ಕಬಡ್ಡಿ ಪಂದ್ಯಾಟದಲ್ಲಿ ದಕ್ಷಿಣ ಕನ್ನಡ, ಉಡುಪಿ,ಕೊಡಗು, ಹಾಸನ, ಚಿಕ್ಕಮಗಳೂರು, ಮೈಸೂರು, ಮಂಡ್ಯ ಹಾಗೂ ಚಾಮರಾಜನಗರ ಜಿಲ್ಲೆಯ 32 ತಂಡಗಳು, ಸುಮಾರು 600ಕ್ಕೂ ಹೆಚ್ಚು ಆಟಗಾರರು ಭಾಗವಹಿಸಲಿದ್ದಾರೆ.
ಆಳ್ವಾಸ್ ಕಾಲೇಜಿನ 350ಕ್ಕೂ ಹೆಚ್ಚು ಮಿಕ್ಕಿ ವಿದ್ಯಾರ್ಥಿಗಳಿಂದ ಸೆಪ್ಟೆಂಬರ್ 27ರಂದು ಸಂಜೆ 6 ಗಂಟೆಯಿಂದ ಸಾಂಸ್ಕೃತಿಕ ವೈಭವದ ಕಾರ್ಯಕ್ರಮ ನಡೆಯಲಿದೆ.
ಈ ಎರಡು ದಿನಗಳ ವೈಭವದಲ್ಲಿ ಸುಮಾರು 25 ಸಾವಿರ ಜನರ ನಿರೀಕ್ಷೆಯಿದ್ದು, ಸುಮಾರು 100 ವಿವಿಧ ಬಗೆಯ ಸ್ಟಾಲ್ ಗಳು ಇರಲಿವೆ.

