ಮಧ್ಯಪ್ರದೇಶ: ಹೆರಿಗೆ ಕೊಠಡಿಯಲ್ಲಿ ವೈದ್ಯೆಯ ಮೇಲೆ ಇಂಟರ್ನ್ ವಿದ್ಯಾರ್ಥಿನಿಯರ ಹಲ್ಲೆ

ಮಧ್ಯಪ್ರದೇಶ: ಹೆರಿಗೆ ಕೊಠಡಿಯಲ್ಲಿ ವೈದ್ಯೆಯ ಮೇಲೆ ಇಂಟರ್ನ್ ವಿದ್ಯಾರ್ಥಿನಿಯರ ಹಲ್ಲೆ

ಮಧ್ಯಪ್ರದೇಶ, ಸೆಪ್ಟೆಂಬರ್ 18: ಸಮಾಜದಲ್ಲಿ ಮನುಷ್ಯತ್ವ ಮರೆತು ವರ್ತಿಸುವ ಘಟನೆಗಳು ಹೆಚ್ಚಾಗುತ್ತಿವೆ. ಇಂತಹದ್ದೇ ಒಂದು ಆಘಾತಕಾರಿ ಘಟನೆ ಮಧ್ಯಪ್ರದೇಶದ ಶಹದೋಲ್ ಜಿಲ್ಲೆಯ ಬಿರ್ಸಾ ಮುಂಡಾ ಸರ್ಕಾರಿ ವೈದ್ಯಕೀಯ ಕಾಲೇಜಿನಲ್ಲಿ ನಡೆದಿದೆ.

ಹೆರಿಗೆ ನೋವಿನಿಂದ ನರಳುತ್ತಿದ್ದ ಮಹಿಳೆಯೊಬ್ಬರನ್ನು ನೋಡಿಕೊಳ್ಳುತ್ತಿದ್ದ ಕರ್ತವ್ಯದಲ್ಲಿದ್ದ ವೈದ್ಯೆಯ ಮೇಲೆ ಇಂಟರ್ನ್ ವಿದ್ಯಾರ್ಥಿನಿಯರು ಹಲ್ಲೆ ನಡೆಸಿದ್ದಾರೆ. ಈ ದೃಶ್ಯವನ್ನೊಳಗೊಂಡ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ವೀಡಿಯೋದಲ್ಲಿ, ಮಹಿಳೆಯನ್ನು ಕರೆದೊಯ್ಯುವ ಸಂದರ್ಭ ಇಂಟರ್ನ್ ವಿದ್ಯಾರ್ಥಿನಿಯರು ವೈದ್ಯೆಯ ತಲೆಕೂದಲನ್ನು ಎಳೆದಾಡುತ್ತಿರುವುದು ಸ್ಪಷ್ಟವಾಗಿ ಕಾಣಿಸುತ್ತದೆ. ಅಷ್ಟೇ ಅಲ್ಲದೆ, ಪುರುಷ ವೈದ್ಯರೊಬ್ಬರು ಮಧ್ಯ ಪ್ರವೇಶಿಸಿ ಪರಿಸ್ಥಿತಿ ನಿಯಂತ್ರಣಕ್ಕೆ ತರಲು ಯತ್ನಿಸಿದರೂ, ವಿದ್ಯಾರ್ಥಿನಿಯರು ವೈದ್ಯೆಗೆ ಬೆದರಿಕೆ ಹಾಕಿದ ದೃಶ್ಯವೂ ದಾಖಲಾಗಿದೆ.

ಈ ಘಟನೆ ಬೆಳಕಿಗೆ ಬಂದ ಬಳಿಕ ವಿದ್ಯಾರ್ಥಿನಿಯರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಸಾಮಾಜಿಕ ಜಾಲತಾಣ ಬಳಕೆದಾರರು ಆಗ್ರಹ ವ್ಯಕ್ತಪಡಿಸುತ್ತಿದ್ದಾರೆ.

ಅಪರಾಧ ರಾಷ್ಟ್ರೀಯ