ಅಪರೂಪದ ವೈದ್ಯಕೀಯ ಘಟನೆ – ಒಟ್ಟಿಗೆ ನಾಲ್ಕು ಮಕ್ಕಳಿಗೆ ಜನ್ಮ

ಅಪರೂಪದ ವೈದ್ಯಕೀಯ ಘಟನೆ – ಒಟ್ಟಿಗೆ ನಾಲ್ಕು ಮಕ್ಕಳಿಗೆ ಜನ್ಮ

ಮಹಾರಾಷ್ಟ್ರದ ಸಾತಾರಾ ಜಿಲ್ಲೆಯ ಕ್ರಾಂತಿಸಿಂಗ್ ನಾನಾ ಪಾಟೀಲ್ ಸರ್ಕಾರಿ ಆಸ್ಪತ್ರೆಯಲ್ಲಿ 30 ವರ್ಷದ ಮಹಿಳೆ ಒಟ್ಟಿಗೆ ನಾಲ್ಕು ಮಕ್ಕಳಿಗೆ (ಕ್ವಾಡ್ರಪ್ಲೆಟ್ಸ್) ಜನ್ಮ ನೀಡಿರುವ ಘಟನೆ ಅಪರೂಪದ ವೈದ್ಯಕೀಯ ದಾಖಲಾಗಿಯೇ ಪರಿಣಮಿಸಿದೆ.

ಗುಜರಾತ್ ಮೂಲದ ಈ ಮಹಿಳೆ ಕೂಲಿ ಕೆಲಸ ಮಾಡುವವಳಾಗಿದ್ದು, ಮೊದಲ ಗರ್ಭಧಾರಣೆಯಲ್ಲಿ ಜವಳಿ ಮಕ್ಕಳಿಗೆ ಹಾಗೂ ಎರಡನೇ ಗರ್ಭಧಾರಣೆಯಲ್ಲಿ ಒಬ್ಬ ಮಗುವಿಗೆ ಜನ್ಮ ನೀಡಿದ್ದರಿಂದ, ಈಗಾಗಲೇ ಒಟ್ಟು ಏಳು ಮಕ್ಕಳ ತಾಯಿ ಆಗಿದ್ದಾಳೆ.

ಈ ಬಾರಿ ಜನ್ಮ ಪಡೆದ ನಾಲ್ಕು ಮಕ್ಕಳು (ಮೂರು ಹೆಣ್ಣುಮಕ್ಕಳು ಹಾಗೂ ಒಬ್ಬ ಗಂಡು ಮಗು) ತೂಕ ಕಡಿಮೆಯಿರುವ ಕಾರಣ ನವಜಾತ ಶಿಶು ತೀವ್ರ ನಿಗಾ ಘಟಕ (NICU) ದಲ್ಲಿ ದಾಖಲಿಸಲಾಗಿದೆ. ತಾಯಿ ಹಾಗೂ ಮಕ್ಕಳು ಇಬ್ಬರೂ ಸುರಕ್ಷಿತರಾಗಿದ್ದು, ವೈದ್ಯರು ನಿರಂತರವಾಗಿ ಆರೋಗ್ಯ ಸ್ಥಿತಿಯನ್ನು ಮೇಲ್ವಿಚಾರಣೆ ಮಾಡುತ್ತಿದ್ದಾರೆ.

ವೈದ್ಯಕೀಯ ತಜ್ಞರ ಪ್ರಕಾರ, ಇಂತಹ ಬಹುಜನ್ಮಗಳ ಹಿಂದೆ ಆನುವಂಶಿಕ ಕಾರಣಗಳಿರಬಹುದು. ಆದರೆ ಒಟ್ಟಿಗೆ ನಾಲ್ಕು ಮಕ್ಕಳ ಜನನ ಅತಿ ಅಪರೂಪವಾದ ಘಟನೆ. ಈ ಅಪಾಯಭರಿತ ಪರಿಸ್ಥಿತಿಯಲ್ಲಿಯೂ ಯಶಸ್ವಿಯಾಗಿ ಹೆರಿಗೆಯನ್ನು ನೆರವೇರಿಸಿರುವುದಕ್ಕಾಗಿ ಸರ್ಕಾರಿ ಆಸ್ಪತ್ರೆಯ ವೈದ್ಯರು ಹಾಗೂ ಸಿಬ್ಬಂದಿ ವರ್ಗ ಶ್ಲಾಘನೆಗೆ ಪಾತ್ರರಾಗಿದ್ದಾರೆ.

ತಂತ್ರಜ್ಞಾನ ರಾಷ್ಟ್ರೀಯ