ಮಧ್ಯಪ್ರದೇಶದ ಖಜುರಾಹೋ ಸ್ಮಾರಕ ಸಮೂಹದಲ್ಲಿರುವ ಜವರಿ ದೇವಾಲಯದ 7 ಅಡಿ ಎತ್ತರದ ವಿಷ್ಣು ವಿಗ್ರಹದ ಶಿರವನ್ನು ಮರುಸ್ಥಾಪಿಸುವಂತೆ ಸಲ್ಲಿಸಲಾದ ಅರ್ಜಿಯನ್ನು ಸುಪ್ರೀಂ ಕೋರ್ಟ್ ತಿರಸ್ಕರಿಸಿದೆ.

ಅರ್ಜಿದಾರ ರಾಕೇಶ್ ದಲಾಲ್ ಅವರು, ಈ ವಿಗ್ರಹವನ್ನು ಮುಘಲ್ ಆಕ್ರಮಣದ ಸಮಯದಲ್ಲಿ ಹಾನಿಗೊಳಗಾಗಿದ್ದು, ಇಂದಿಗೂ ದುರಸ್ತಿ ಮಾಡದೆ ಬಿಟ್ಟಿರುವುದು ಭಕ್ತರ ಧಾರ್ಮಿಕ ಹಕ್ಕಿಗೆ ಧಕ್ಕೆಯಾಗಿದೆ ಎಂದು ವಾದಿಸಿದ್ದರು.
ಮುಖ್ಯ ನ್ಯಾಯಮೂರ್ತಿ ಬಿ.ಆರ್. ಗವಾಯಿ ಹಾಗೂ ನ್ಯಾಯಮೂರ್ತಿ ಆಗಸ್ಟಿನ್ ಜಾರ್ಜ್ ಮಸಿಹ್ ಅವರು ಒಳಗೊಂಡಿದ್ದ ಪೀಠವು, ಈ ವಿಷಯ ನ್ಯಾಯಾಲಯದ ವ್ಯಾಪ್ತಿಗೆ ಬರುವುದಿಲ್ಲ, ಬದಲಿಗೆ ಪುರಾತತ್ವ ಇಲಾಖೆ (ASI) ಯ ಅಧೀನಕ್ಕೆ ಒಳಪಡುತ್ತದೆ ಎಂದು ಸ್ಪಷ್ಟಪಡಿಸಿದೆ.
ಮುಖ್ಯ ನ್ಯಾಯಮೂರ್ತಿ ಗವಾಯಿ ಅವರು, “ಈಗ ದೇವರನ್ನೇ ಕೇಳಿ, ಆತನೇ ಏನಾದರೂ ಮಾಡುತ್ತಾನೆ” ಪ್ರತಿಕ್ರಿಯಿಸಿದರು. ಸ್ಥಳ ಪುರಾತತ್ವ ಮಹತ್ವ ಹೊಂದಿರುವುದರಿಂದ ಯಾವುದೇ ಮರುಸ್ಥಾಪನೆ ಕಾರ್ಯಕ್ಕೆ ASI ಅನುಮತಿ ಅಗತ್ಯವಿದೆ ಎಂದು ನ್ಯಾಯಾಲಯ ತಿಳಿಸಿದೆ.
ಭಕ್ತರ ಭಾವನೆಗಳು ಅರ್ಥಗರ್ಭಿತವಾದರೂ, ಕಾನೂನು ಪ್ರಕ್ರಿಯೆಯ ಪ್ರಕಾರ ಪುನಃಸ್ಥಾಪನೆ ಕಾರ್ಯ ಪುರಾತತ್ವ ಇಲಾಖೆಯ ನಿಯಮಾವಳಿಗಳ ಮೂಲಕವೇ ನಡೆಯಬೇಕೆಂದು ಕೋರ್ಟ್ ಸೂಚಿಸಿದೆ.

