🏆 ಭಾರತದ ಹೆಮ್ಮೆ– ಸತತ ಎರಡನೇ ಬಾರಿ ಗ್ರ್ಯಾಂಡ್ ಸ್ವಿಸ್ ಟೈಟಲ್ ಗೆದ್ದ ವೈಶಾಲಿ

🏆 ಭಾರತದ ಹೆಮ್ಮೆ– ಸತತ ಎರಡನೇ ಬಾರಿ ಗ್ರ್ಯಾಂಡ್ ಸ್ವಿಸ್ ಟೈಟಲ್ ಗೆದ್ದ ವೈಶಾಲಿ

ಉಜ್ಬೆಕಿಸ್ತಾನದಲ್ಲಿ ನಡೆದ ಎಫ್‌ಐಡಿಇ ಗ್ರ್ಯಾಂಡ್ ಸ್ವಿಸ್ ಚೆಸ್ ಟೂರ್ನಮೆಂಟ್ನಲ್ಲಿ ಭಾರತದ ಅಂತರರಾಷ್ಟ್ರೀಯ ಗ್ರ್ಯಾಂಡ್ ಮಾಸ್ಟರ್ ವೈಶಾಲಿ ರಾಮೇಶ್‌ಬಾಬು ಸತತ ಎರಡನೇ ಬಾರಿ ಚಾಂಪಿಯನ್ ಪಟ್ಟವನ್ನು ತಮ್ಮದಾಗಿಸಿಕೊಂಡಿದ್ದಾರೆ.

24 ವರ್ಷದ ವೈಶಾಲಿ, ಅಂತಿಮ ಸುತ್ತಿನಲ್ಲಿ ಮಾಜಿ ಮಹಿಳಾ ವಿಶ್ವಚೆಸ್ ಚಾಂಪಿಯನ್ ತಾನ್ ಝೋಂಗ್‌ಯಿ ವಿರುದ್ಧ ಸಮಬಲ ಸಾಧನೆ ಮಾಡಿ ಒಟ್ಟು 8 ಅಂಕ (8/11) ಗಳೊಂದಿಗೆ ಪ್ರಶಸ್ತಿ ಜಯಿಸಿದರು.

ಈ ಜಯದಿಂದ ವೈಶಾಲಿ ತಮ್ಮ ಅಂತರರಾಷ್ಟ್ರೀಯ ಖ್ಯಾತಿಯನ್ನು ಮತ್ತಷ್ಟು ಬಲಪಡಿಸಿದ್ದು, ಭಾರತದ ಚೆಸ್ ಕ್ರೀಡಾ ಇತಿಹಾಸದಲ್ಲಿ ಮತ್ತೊಂದು ಚಿನ್ನ ಸೇರ್ಪಡೆಗೊಂಡಿದೆ.

ಕ್ರೀಡೆ