ಬೆಂಗಳೂರು, ಸೆಪ್ಟೆಂಬರ್ 16: ದೇಶದ ಬಂಗಾರದ ಮಾರುಕಟ್ಟೆಯಲ್ಲಿ ಇಂದು ಚಿನ್ನ ಮತ್ತು ಬೆಳ್ಳಿ ಬೆಲೆ ಭರ್ಜರಿಯಾಗಿ ಏರಿಕೆ ಕಂಡಿದೆ. ಆಭರಣ ಚಿನ್ನದ (22 ಕ್ಯಾರಟ್) ಬೆಲೆ 10 ಗ್ರಾಂಗೆ ₹1,02,600 ತಲುಪಿದ್ದು, ಅಪರಂಜಿ ಚಿನ್ನ (24 ಕ್ಯಾರಟ್) 10 ಗ್ರಾಂಗೆ ₹1,11,930ಕ್ಕೆ ಏರಿಕೆಯಾಗಿದೆ. 18 ಕ್ಯಾರಟ್ ಚಿನ್ನದ ಬೆಲೆ 10 ಗ್ರಾಂಗೆ ₹83,950 ಆಗಿದೆ.

ಬೆಳ್ಳಿಯೂ ದುಬಾರಿಯಾಗಿ 10 ಗ್ರಾಂಗೆ ₹1,340 ತಲುಪಿದೆ. ಚೆನ್ನೈ, ಮುಂಬೈ, ದೆಹಲಿ ಸೇರಿದಂತೆ ಪ್ರಮುಖ ನಗರಗಳಲ್ಲಿಯೂ ಇದೇ ದರ ದಾಖಲಾಗಿದೆ. ತಮಿಳುನಾಡು ಮತ್ತು ಕೇರಳದಲ್ಲಿ ಬೆಳ್ಳಿ ಬೆಲೆ 100 ಗ್ರಾಂಗೆ ₹14,400ಕ್ಕೆ ಏರಿಕೆಯಾಗಿದೆ. ವಿದೇಶಿ ಮಾರುಕಟ್ಟೆಯಲ್ಲೂ ಚಿನ್ನದ ದರ ಗರಿಷ್ಠ ಮಟ್ಟ ತಲುಪಿದ್ದು, ಮುಂದಿನ ದಿನಗಳಲ್ಲಿ ಬೆಲೆ ಏರಿಕೆ ಮುಂದುವರಿಯುವ ನಿರೀಕ್ಷೆಯಿದೆ.

