ಹಜಾರಿಬಾಗ್ ಜಿಲ್ಲೆಯ ಟಟಿಜ್ಹಾರಿಯಾ ತಾಲೂಕಿನ ಕರಾಂಡಿ ಗ್ರಾಮದಲ್ಲಿ ನಡೆದ ಎನ್‌ಕೌಂಟರ್‌ನಲ್ಲಿ ಮೂವರು ನಕ್ಸಲ್ ನಾಯಕರು ಹತರಾಗಿದ್ದಾರೆ.

ಗುಪ್ತಚರ ಮಾಹಿತಿಯ ಆಧಾರದ ಮೇಲೆ ಭದ್ರತಾ ಪಡೆಗಳು ನಡೆಸಿದ ಈ ಕಾರ್ಯಾಚರಣೆಯಲ್ಲಿ ತಲೆಗೆ 1ಕೋಟಿ ಘೋಷಣೆಯಾಗಿದ್ದ ಸಹದೇವ್ ಸೋರೆನ್ ಅಕಾ ಪರ್ವೇಶ್, 25 ಲಕ್ಷ ಘೋಷಣೆಯಾಗಿದ್ದ ರಘುನಾಥ ಹೆಂಬ್ರೋಮ್ ಅಕಾ ಚಂಚಲ್, ಮತ್ತು ₹10 ಲಕ್ಷ ಘೋಷಣೆಯಾಗಿದ್ದ ಬಿರ್ಸೆನ್ ಗಾಂಜು ಅಕಾ ರಾಮ್ಖೇಲಾವನ್ ಹತ್ಯೆಯಾಗಿದ್ದಾರೆ.
ಭದ್ರತಾ ಪಡೆಯ ಈ ಯಶಸ್ಸು ನಕ್ಸಲ್ ಚಟುವಟಿಕೆಗಳಿಗೆ ದೊಡ್ಡ ಹೊಡೆತವೆಂದು ಪರಿಗಣಿಸಲಾಗಿದೆ.

