ಎಸ್ಸೆಸ್ಸೆಫ್ ಸುಳ್ಯ ಡಿವಿಷನ್ ಸಾಹಿತ್ಯೋತ್ಸವ

ಎಸ್ಸೆಸ್ಸೆಫ್ ಸುಳ್ಯ ಡಿವಿಷನ್ ಸಾಹಿತ್ಯೋತ್ಸವ

ಬೆಳ್ಳಾರೆ ಸೆಕ್ಟರ್ ಚಾಂಪಿಯನ್ – ಅಜ್ಜಾವರ ಸೆಕ್ಟರ್ ರನ್ನರ್ಸ್

ಸುಳ್ಯ: ಎಸ್ಸೆಸ್ಸೆಫ್ ಸುಳ್ಯ ಡಿವಿಷನ್ ಸಾಹಿತ್ಯೋತ್ಸವವು ಸೆಪ್ಟೆಂಬರ್ 14ರಂದು ಅಜ್ಜಾವರ ಮೇನಾಲದಲ್ಲಿ ಭವ್ಯವಾಗಿ ನೆರವೇರಿತು. ಡಿವಿಷನ್ ಅಧ್ಯಕ್ಷ ರಿಯಾನ್ ಸಅದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಈ ಕಾರ್ಯಕ್ರಮಕ್ಕೆ ಸಯ್ಯಿದ್ ಕುಂಞಿ ಕೋಯ ತಂಙಳ್ ಸಅದಿ ಸುಳ್ಯ ದುಆ ಮೂಲಕ ಚಾಲನೆ ನೀಡಿದರು. ಅಬ್ದುಲ್ಲಾ ಸಅದಿ ಧ್ವಜಾರೋಹಣ ನೆರವೇರಿಸಿದರು. ಉದ್ಘಾಟನೆಯನ್ನು ಕರ್ನಾಟಕ ಮುಸ್ಲಿಂ ಜಮಾಅತ್ ಸುಳ್ಯ ಝೋನ್ ಅಧ್ಯಕ್ಷ ಹಮೀದ್ ಬೀಜಕೊಚ್ಚಿ ನೆರವೇರಿಸಿದರು.

ಉದ್ಘಾಟನಾ ಸಮಾರಂಭದ ವೇದಿಕೆಯಲ್ಲಿ ಸಾಹಿತ್ಯೋತ್ಸವ ಚೇರ್ಮನ್ ಸಾಬೀತ್ ಹಿಕಮಿ ಎಲಿಮಲೆ, ಅಬ್ದುಲ್ ಹಮೀದ್ ಸುಣ್ಣಮೂಲೆ, ಸಿದ್ದೀಕ್ ಕಟ್ಟೆಕಾರ್, ಜಬ್ಬಾರ್ ಸಖಾಫಿ, ಲತೀಫ್ ಜೌಹರಿ, ಸಿರಾಜುದ್ದೀನ್ ಹಿಮಮಿ, ಶರೀಫ್ ಜಯನಗರ ಮತ್ತಿತರ ಸಂಘಟನಾ ನಾಯಕರು ಉಪಸ್ಥಿತರಿದ್ದರು. ಸ್ವಾಗತವನ್ನು ಸ್ವಾದಿಕ್ ಮಾಸ್ಟರ್ ಸಲ್ಲಿಸಿ, ಶಮೀರ್ ಡಿ.ಹೆಚ್. ವಂದಿಸಿದರು.

ಡಿವಿಷನ್‌ನ ಮೂರು ಸೆಕ್ಟರ್‌ಗಳ ಸುಮಾರು 300ಕ್ಕೂ ಹೆಚ್ಚು ಸ್ಪರ್ಧಾರ್ಥಿಗಳು 120ಕ್ಕೂ ಅಧಿಕ ಸ್ಪರ್ಧೆಗಳಲ್ಲಿ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಿದರು. ಇದರಲ್ಲಿ ಬೆಳ್ಳಾರೆ ಸೆಕ್ಟರ್ ಚಾಂಪಿಯನ್ ಆಗಿ ಹೊರಹೊಮ್ಮಿ, ಅಜ್ಜಾವರ ಸೆಕ್ಟರ್ ರನ್ನರ್ಸ್ ಸ್ಥಾನ ಗಳಿಸಿತು.

ವೈಯಕ್ತಿಕ ಪ್ರಶಸ್ತಿಗಳಲ್ಲಿ, ಸ್ಟೇಜ್ ಕಾರ್ಯಕ್ರಮದಲ್ಲಿ ಅಜ್ಜಾವರ ಸೆಕ್ಟರ್‌ನ ಅಹ್ಮದ್ ಶಮ್ಮಾಸ್ “ಸ್ಟಾರ್ ಆಫ್ ದಿ ಫೆಸ್ಟ್”, ಸ್ಟೇಜೆತರ ಕಾರ್ಯಕ್ರಮದಲ್ಲಿ ಬೆಳ್ಳಾರೆ ಸೆಕ್ಟರ್‌ನ ಮಹಮ್ಮದ್ ಅಫ್ಲಾಲ್ “ಪೆನ್ ಆಫ್ ದಿ ಫೆಸ್ಟ್” ಪ್ರಶಸ್ತಿಯನ್ನು ಪಡೆದರು.

ಕಾರ್ಯಕ್ರಮದಲ್ಲಿ ಸಯ್ಯಿದ್ ಮುಹ್ಸಿನ್ ಸೈದಲವಿ ಕೋಯ ತಂಙಳ್ ಕುಂಜಿಲ ಹುಬ್ಬುರ್ರಸೂಲ್” ಪ್ರಭಾಷಣ ನೀಡಿದರು.

ಸಮಾರೋಪ ಸಮಾರಂಭಕ್ಕೆ ಶೈಖುನಾ ಮಹ್ಮೂದ್ ಫೈಝಿ ಉಸ್ತಾದ್ ದುಆ ನೆರವೇರಿಸಿ ಶುಭ ಹಾರೈಸಿದರು. ಸಾಹಿತ್ಯೋತ್ಸವ ಸಮಿತಿ ಚೇರ್ಮನ್ ಸಾಬೀತ್ ಹಿಕಮಿ ಅಧ್ಯಕ್ಷತೆ ವಹಿಸಿದರು. ಡಿವಿಷನ್ ಅಧ್ಯಕ್ಷ ರಿಯಾನ್ ಸಅದಿ ಸ್ವಾಗತ ಭಾಷಣ ಮಾಡಿ, “ಸಾಹಿತ್ಯೋತ್ಸವವೆಂದರೆ ಎಸ್ಸೆಸ್ಸೆಫ್ ಕಾರ್ಯಕರ್ತರಿಗೆ ಹಬ್ಬದ ವಾತಾವರಣ” ಎಂದು ಹೇಳಿದರು.

ಮುಖ್ಯ ಅತಿಥಿಗಳಾಗಿ ಎಸ್ಸೆಸ್ಸೆಫ್ ಕರ್ನಾಟಕ ರಾಜ್ಯ ಸಮಿತಿ ಸದಸ್ಯ ಸ್ವಬಾಹ್ ಹಿಮಮಿ ಸಖಾಫಿ, ಇಬ್ರಾಹಿಂ ಸೀ ಫುಡ್, ಶರೀಫ್ ಕಂಠಿ, ಉಮ್ಮರ್ ಕೆ.ಎಸ್., ಫೈಝಲ್ ಕಟ್ಟೆಕಾರ್, ಲತೀಫ್ ಹರ್ಲಡ್ಕ, ಶಫೀಕ್ ಸಅದಿ, ಮುಸ್ತಾಫಾ ಕೆ.ಎಂ., ಇಬ್ರಾಹಿಂ ಹಾಜಿ ಅಲ್ ಮದೀನಾ, ಹನೀಫ್ ಅಲ್ಫಾ, ಸಂಶುದ್ದೀನ್ ಎಸ್.ಎ.ಎಸ್. ಸೇರಿದಂತೆ ಅನೇಕ ಸಮಾಜ, ಧಾರ್ಮಿಕ ಹಾಗೂ ಸಂಘಟನಾ ನಾಯಕರೂ ಉಪಸ್ಥಿತರಿದ್ದರು.

ಮುಕ್ತಾರ್ ಹಿಮಮಿ ಸಖಾಫಿ ನಿರೂಪಣೆ ಮಾಡಿ, ಡಿವಿಷನ್ ಕಾರ್ಯದರ್ಶಿ ಶಮೀರ್ ಡಿ.ಹೆಚ್. ವಂದಿಸಿದರು. ಮೂರು ಸ್ವಲಾತ್‌ನೊಂದಿಗೆ ಕಾರ್ಯಕ್ರಮ ಮುಕ್ತಾಯಗೊಂಡಿತು

ಧಾರ್ಮಿಕ ಮನೋರಂಜನೆ