ಪಾಕಿಸ್ತಾನ ವಿರುದ್ಧದ ಗೆಲುವು – ಶೌರ್ಯ ತೋರಿದ ನಮ್ಮ ಸೈನಿಕರಿಗೆ ಸಮರ್ಪಣೆ ಎಂದ ನಾಯಕ

ಪಾಕಿಸ್ತಾನ ವಿರುದ್ಧದ ಗೆಲುವು – ಶೌರ್ಯ ತೋರಿದ ನಮ್ಮ ಸೈನಿಕರಿಗೆ ಸಮರ್ಪಣೆ ಎಂದ ನಾಯಕ

ಏಷ್ಯಾ ಕಪ್‌ ಕ್ರಿಕೆಟ್‌ನಲ್ಲಿ ಪಾಕಿಸ್ತಾನ ವಿರುದ್ಧ 7 ವಿಕೆಟ್‌ಗಳ ಭರ್ಜರಿ ಜಯ ಸಾಧಿಸಿದ ನಂತರ, ಭಾರತ ತಂಡದ ನಾಯಕ ಸೂರ್ಯಕುಮಾರ್ ಯಾದವ್ ತಮ್ಮ ವಿಜಯವನ್ನು ಪಹಲ್ಗಾಮ್ ಉಗ್ರ ದಾಳಿಯಲ್ಲಿ ಬಲಿಯಾದವರ ಕುಟುಂಬಗಳಿಗೆ ಅರ್ಪಿಸಿದರು.

ಪಂದ್ಯದ ನಂತರ ಮಾತನಾಡಿದ ಅವರು, “ಪಹಲ್ಗಾಮ್ ಉಗ್ರ ದಾಳಿಯಲ್ಲಿ ಬಲಿಯಾದವರ ಕುಟುಂಬಗಳೊಂದಿಗೆ ನಾವು ನಿಂತಿದ್ದೇವೆ. ನಮ್ಮ ಸಾಂತ್ವನವನ್ನು ವ್ಯಕ್ತಪಡಿಸುತ್ತೇವೆ. ಈ ಗೆಲುವನ್ನು ಶೌರ್ಯ ತೋರಿದ ನಮ್ಮ ಸೈನಿಕರಿಗೆ ಸಮರ್ಪಿಸುತ್ತೇನೆ. ಅವರು ಸದಾ ನಮಗೆ ಪ್ರೇರಣೆ ನೀಡುತ್ತಿದ್ದಾರೆ. ನಾವು ಮೈದಾನದಲ್ಲಿ ಆಡುವಾಗ ಅವರಿಗೆ ಸಂತೋಷ ನೀಡುವ ಅವಕಾಶ ದೊರೆಯಲಿ ಎಂಬುದು ನಮ್ಮ ಆಶಯ” ಎಂದು ಹೇಳಿದರು.

ಸೂರ್ಯಕುಮಾರ್ ಅವರ ಈ ಭಾವನಾತ್ಮಕ ಸಂದೇಶವನ್ನು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿದೆ.

ಅಂತರಾಷ್ಟ್ರೀಯ ಕ್ರೀಡೆ