ರಸ್ತೆ ನಿರ್ಮಾಣ ವೇಳೆ ಮಸೀದಿ ಅಡಿಯಲ್ಲಿ ಸುರಂಗ ಪತ್ತೆ

ರಸ್ತೆ ನಿರ್ಮಾಣ ವೇಳೆ ಮಸೀದಿ ಅಡಿಯಲ್ಲಿ ಸುರಂಗ ಪತ್ತೆ

ಇತ್ತೀಚೆಗೆ ಪುಣೆಯ ಮಾಂಛರ್ ಪ್ರದೇಶದಲ್ಲಿ ಮಸೀದಿ ಅಡಿಯಲ್ಲಿ ಸುರಂಗದಂತಹ ಮರದ ರಚನೆ ಪತ್ತೆಯಾದ ಹಿನ್ನೆಲೆಯಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದೆ. ಗುರುವಾರ ಸಂಜೆ ಪುನರ್‌ನಿರ್ಮಾಣ ಕಾಮಗಾರಿ ವೇಳೆ ದರ್ಗಾ ಗೋಡೆಯ ಒಂದು ಭಾಗ ಕುಸಿದ ನಂತರ ಈ ರಹಸ್ಯಮಯ ಸುರಂಗ ಬೆಳಕಿಗೆ ಬಂದಿದೆ.

ಈ ಘಟನೆ ಬಳಿಕ ಹಿಂದೂ ಸಂಘಟನೆಗಳು ಅಲ್ಲಿ ದೇವಸ್ಥಾನ ಇರಬಹುದೆಂದು ಶಂಕೆ ವ್ಯಕ್ತಪಡಿಸಿ ತನಿಖೆ ನಡೆಸುವಂತೆ ಆಗ್ರಹಿಸಿವೆ. ಇನ್ನೊಂದೆಡೆ, ಮುಸ್ಲಿಂ ಸಂಘಟನೆಗಳು ಈ ಘಟನೆಗೆ ಆಕ್ರೋಶ ವ್ಯಕ್ತಪಡಿಸಿ, ಇದೊಂದು ದುರಂತಘಟನೆ ಎಂದಿವೆ.

ಸಮುದಾಯಗಳ ನಡುವೆ ಉಂಟಾದ ವಿವಾದದಿಂದ ಸ್ಥಳದಲ್ಲಿ ಉದ್ವಿಗ್ನತೆ ಹೆಚ್ಚಳ ಕಂಡುಬಂದಿದ್ದು, ಪೊಲೀಸರ ಭಾರೀ ಪಡೆ ನಿಯೋಜಿಸಲಾಗಿದೆ. ಪ್ರವೇಶಕ್ಕೆ ನಿರ್ಬಂಧ ಹೇರಲಾಗಿದ್ದು, ಸಿಸಿಟಿವಿ ಕ್ಯಾಮೆರಾ ಅಳವಡಿಕೆ ಸೇರಿದಂತೆ ಕಟ್ಟುನಿಟ್ಟಿನ ಭದ್ರತಾ ಕ್ರಮ ಕೈಗೊಳ್ಳಲಾಗಿದೆ.

ಅಧಿಕಾರಿಗಳು ಈ ಪ್ರಕರಣವನ್ನು ಸಂಬಂಧಿತ ಇಲಾಖೆಗೆ ಹಸ್ತಾಂತರಿಸಿರುವುದಾಗಿ ತಿಳಿಸಿದ್ದು, ತನಿಖೆ ನಡೆಯುತ್ತಿದೆ. ಅಧಿಕಾರಿಗಳು ಸಾರ್ವಜನಿಕರಿಗೆ ಶಾಂತಿ ಕಾಪಾಡುವಂತೆ ಮನವಿ ಮಾಡಿದ್ದಾರೆ.

ಅಪರಾಧ ರಾಷ್ಟ್ರೀಯ