ಮದ್ದೂರು: ಬಿಜೆಪಿ ಶಾಸಕರಾದ ಬಸವನಗೌಡ ಪಾಟೀಲ ಯತ್ನಾಳ್ ಅವರು ಭಾನುವಾರ ಬಿಜೆಪಿ ವಿರುದ್ಧ ಕಿಡಿಕಾರಿದರು.

“ಬಿಜೆಪಿಯವರು ಗೌರವಯುತವಾಗಿ ನಮ್ಮನ್ನು ಪರಿಗಣಿಸದಿದ್ದರೆ, ನಾನು ಹೊಸ ಹಿಂದೂ ಪಕ್ಷ ಕಟ್ಟುತ್ತೇನೆ. ಆ ಪಕ್ಷದ ಗುರುತು ಜೆಸಿಬಿ ಆಗಿರುತ್ತದೆ. ಅಧಿಕಾರಕ್ಕೆ ಬಂದರೆ ಮುಸ್ಲಿಮರ ಮೀಸಲಾತಿ ತೆಗೆದು ಹಿಂದೂಗಳಿಗೆ ಹಂಚುತ್ತೇವೆ” ಎಂದು ಘೋಷಿಸಿದರು.
ಅವರು ಮುಂದುವರಿದು, “ಅಕ್ರಮವಾಗಿ ಕಟ್ಟಿದ ಮಸೀದಿಗಳನ್ನು ತೆರವುಗೊಳಿಸಲಾಗುತ್ತದೆ. ಗೋ ತೈ ಮಾಡುವವರಿಗೆ ಗತಿ ಕಾಣಿಸುತ್ತೇವೆ. ನಮ್ಮ ಸರಕಾರ ಅಧಿಕಾರಕ್ಕೆ ಬಂದರೆ ಮಸೀದಿ ಮುಂದೆ ಗಂಟೆಗಟ್ಟಲೆ ನೃತ್ಯ ಮಾಡಲು ಅವಕಾಶ ನೀಡುತ್ತೇವೆ. 2028ರ ವೇಳೆಗೆ ವಿಧಾನಸೌಧದ ಮುಂದೆ ಭಗವಧ್ವಜ ಹಾರಿಸುವೆವು” ಎಂದು ಹೇಳಿದರು.
ಯತ್ನಾಳ್ ಅವರ ಈ ಹೇಳಿಕೆ ಮದ್ದೂರಿನಲ್ಲಿ ರಾಜಕೀಯ ವಲಯದಲ್ಲಿ ಚರ್ಚೆಗೆ ಕಾರಣವಾಗಿದೆ.

